Publish Date: Sat, 17 Nov 2018 (10:37 IST)
Updated Date: Sat, 17 Nov 2018 (10:38 IST)
ಮೈಸೂರು: ಮೇಯರ್ ಸ್ಥಾನ ಹಂಚಿಕೆ ವಿಚಾರವಾಗಿ ಜೆಡಿಎಸ್ ವರಿಷ್ಠರ ವಿರುದ್ಧವೇ ಅಸಮಾಧಾನಗೊಂಡಿರುವ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಮೈಸೂರಿನಲ್ಲಿ ನಮ್ಮದೇನೂ ನಡೆಯಲ್ಲ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿಯೂ ಆಗಿರುವ ಜಿಟಿ ದೇವೇಗೌಡ ಮೈಸೂರು ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಬಗ್ಗೆ ಮೊದಲೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನ ಮಾಡಿಕೊಂಡಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಲೋಕಸಭೆ ದೃಷ್ಟಿಯಿಂದ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಹಿಂದೆ ಉಪಚುನಾವಣೆಯಲ್ಲಿ ಅವರು ನಮಗೆ ಮೂರು ಸ್ಥಾನ ಕೊಟ್ಟಿದ್ದರು, ನಾವು ಎರಡು ಸ್ಥಾನ ಕೊಟ್ಟಿದ್ದೆವು. ಹೀಗಾಗಿ ಮೇಯರ್ ಸ್ಥಾನವನ್ನು ಈಗ ಬಿಟ್ಟುಕೊಡಬೇಕಾಯಿತು. ಪಕ್ಷದ ವರಿಷ್ಠರು ಹೇಳಿದ ಮೇಲೆ ನಾವು ಶಿರಬಾಗಲೇಬೇಕು’ ಎಂದು ಜಿಟಿ ದೇವೇಗೌಡ ಬೇಸರದಿಂದಲೇ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.