Publish Date: Sat, 17 Nov 2018 (09:45 IST)
Updated Date: Sat, 17 Nov 2018 (09:49 IST)
ಬೆಂಗಳೂರು: ಕರಾವಳಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿವಿ ಸದಾನಂದ ಗೌಡ ಪರಸ್ಪರ ಟ್ವಿಟರ್ ನಲ್ಲಿ ಏಟಿಗೆ ಎದಿರೇಟು ಕೊಟ್ಟಿದ್ದಾರೆ.
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ ಟೀಕಿಸಿದ್ದ ಸಿದ್ದರಾಮಯ್ಯ ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಯಲ್ಲೇ ಮನೆ ಮಾಡಿದರೂ ರಾಜ್ಯದ ಜನ ಅವರಿಗೆ ಬೆಂಬಲ ನೀಡಲ್ಲ. ಕರಾವಳಿಯನ್ನು ಕರ್ನಾಟಕ ಕೋಮುವಾದದ ಪ್ರಯೋಗ ಶಾಲೆ ಮಾಡಿದೆ. ಹೀಗಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ ಸದಾನಂದ ಗೌಡ ‘ಸರ್ ಶ್ರೀ ಸಿದ್ದರಾಮಯ್ಯನವರೇ, ಅದೇ ರೆಕಾರ್ಡ್ ಕಂಠಪಾಠ ಮಾಡಿ ಎಷ್ಟು ದಿನ ಸುತ್ತುತ್ತೀರಿ? ಚಾಮುಂಡೇಶ್ವರಿ ಮತದಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿ ಜನ ನಂಬುತ್ತಾರಾ? ಕರಾವಳಿ ಯಾಕೆ ರಾಜ್ಯದ ಜನರಿಗೂ ತಮ್ಮ ಆಯ್ಕೆ ಗೊತ್ತಿದೆ. ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.