Publish Date: Mon, 19 Nov 2018 (09:14 IST)
Updated Date: Mon, 19 Nov 2018 (09:16 IST)
ನವದೆಹಲಿ: ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಛತ್ತೀಸ್ ಘಡ ಚುನಾವಣಾ ಪ್ರಚಾರ ವೇಳೆ ಹರಿಹಾಯ್ದಿದ್ದಾರೆ.
ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಕರ್ನಾಟಕ ಸರ್ಕಾರ ಒಂದು ವರ್ಷವಾದರೂ ಆ ಭರವಸೆ ಪೂರೈಸಿಲ್ಲ. ಬದಲಿಗೆ ಸಾಲ ಬಾಕಿಯಿರುವ ರೈತರಿಗೆ ಬಂಧನದ ವಾರಂಟ್ ನೀಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಆಶ‍್ವಾಸನೆಗಳ ನಾಟಕ ಮಾಡುತ್ತದೆ. ಆದರೆ ದೇಶದಲ್ಲಿ 50 ವರ್ಷ ಆಡಳಿತದಲ್ಲಿ ರೈತರನ್ನು ಸಂಕಷ್ಟಕ್ಕೆ ನೂಕಿದರು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.