Select Your Language

Notifications

webdunia
webdunia
webdunia
webdunia

ಜಿ. ಪರಮೇಶ್ವರ ಸಿಎಂ ಆಸೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಜಿ. ಪರಮೇಶ್ವರ ಸಿಎಂ ಆಸೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ , ಭಾನುವಾರ, 18 ನವೆಂಬರ್ 2018 (20:57 IST)
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸಿಎಂ ಆಗೋ ಮನದಾಳದ ವಿಷಯ ಹೇಳಿಕೊಂಡ ಬೆನ್ನಲ್ಲೇ ಹಲವು ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
 ಕಾಂಗ್ರೆಸ್ ನಲ್ಲಿ ಸಿಎಂ ಆಗೋ ಅರ್ಹತೆ ಬಹಳ‌ ಜನರಿಗಿದೆ. ಅವರಲ್ಲಿ ಪರಮೇಶ್ವರ್ ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ....?  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸದ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕಂದರೆ ಆ ಸೀಟು ಖಾಲಿ ಇಲ್ಲ ಎಂದರು.

ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರ ಸಂಬಂಧ ಮಾತನಾಡಿದ ಅವರು, ಈಗಾಗಲೆ‌ ಸಿಎಂ ಸಭೆ ಮಾಡುತ್ತೇನೆಂದು ಹೇಳಿದ್ದಾರೆ. ಮಂಗಳವಾರ ಸಭೆ ಮಾಡಬಹುದು, ಸ್ಥಳ ಬದಲಾವಣೆ ಬಗ್ಗೆ ನಂಗೆ ಗೊತ್ತಿಲ್ಲ ಎಂದರು.

ನೆಹರು ಅವರನ್ನ ಹಿಟ್ಲರ್ ಎಂದು ಕರೆಯುವ ಆರ್‌ಎಸ್ಎಸ್ ನವರು ಪ್ಯಾಸಿಸ್ಟ್ ಮನೋಭಾವನೆ ಉಳ್ಳವರು. ಬಿಜೆಪಿಯವರು ಹಿಟ್ಲರನಂತೆ ಆಡಳಿತ ನಡೆಸುತ್ತಿದ್ದಾರೆ.  ಬಿಜೆಪಿಯವರು ಹಿಟ್ಲರ್ ವಂಶಸ್ಥರು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತೆ ಎಂದ ಸಿದ್ದರಾಮಯ್ಯ