Publish Date: Sun, 29 Sep 2019 (17:45 IST)
Updated Date: Sun, 29 Sep 2019 (17:47 IST)
ಸರಳವಾಗಿ ಆಚರಿಸಿಬೇಕಿದ್ದ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡ್ತಿರೋದಕ್ಕೆ ಸಂಸದರೊಬ್ಬರೂ ಬಹಿರಂಗವಾಗಿ ಅಸಮಧಾನ ಹೊರಹಾಕೋ ಮೂಲಕ ಸರಕಾರಕ್ಕೆ ಚಾಟಿ ಬೀಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದೆ. ಇಂಥ ಪರಿಸ್ಥಿತಿಯಲ್ಲಿ ದಸರಾ ಅದ್ಧೂರಿ, ಸಂಭ್ರಮದಿಂದ ಆಚರಣೆ ಮಾಡ್ತಿರೋದು ಸರಿಯಲ್ಲ. ಹೀಗಂತ ಸಂಸದ ಶ್ರೀನಿವಾಸ ಪ್ರಸಾದ್ ಬೇಸರ ಹೊರಹಾಕಿದ್ದಾರೆ.
ನನ್ನ ಮನಸ್ಸಿನಂತೆ ನಾನು ನಡೆದುಕೊಳ್ಳುತ್ತೇನೆ. ಮಾನವೀಯತೆ ದೃಷ್ಟಿಯಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ ಅಂತ ಹೇಳಿದ್ದಾರೆ.
ಜನರು ಕಷ್ಟದಲ್ಲಿದ್ದಾರೆ.
ಪ್ರವಾಹ ಜನರನ್ನು ತೊಂದರೆಗೆ ಸಿಲುಕಿಸಿದೆ. ಇಂತಹ ಸನ್ನಿವೇಶದಲ್ಲಿ ಕಷ್ಟದಲ್ಲಿರೋ ಜನರಿಗೆ ಸ್ಪಂದಿಸಬೇಕು. ಹಾಗಂತ ದಸರಾ ನಿಲ್ಲಸಬೇಕು ಅಂತ ಹೇಳುತ್ತಿಲ್ಲ ಅಂತೆಲ್ಲಾ ಸಂಸದ ಹೇಳಿದ್ದಾರೆ.