Select Your Language

Notifications

webdunia
webdunia
webdunia
webdunia

ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ

ಸಿಎಂ ಸಿದ್ದರಾಮಯ್ಯ

geetha

bangalore , ಮಂಗಳವಾರ, 20 ಫೆಬ್ರವರಿ 2024 (21:04 IST)
ಬೆಂಗಳೂರು :ಸ್ವತಃ ನರೇಂದ್ರ ಮೋದಿಯವರು ಗುಜರಾತ್‌ ಸಿಎಂ ಆಗಿದ್ದಾಗ, ನಮ್ಮ ರಾಜ್ಯದಿಂದ ತೆರಿಗೆ ಕೇಳಲೂ ಬೇಡಿ. ಅನುದಾನ ನೀಡಲೂ ಬೇಡಿ ಎಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಬಿಜೆಪಿಯವರನ್ನು ಸದನದಲ್ಲಿ ತರಾಟೆಗೆ ತೆಗೆದುಕೊಂಡರು. 
 
ಕರ್ನಾಟಕ ನೀಡುತ್ತಿರುವ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಹಂಚಿಕೆಯನ್ನು ಮಾಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರ ವಿರುದ್ದ ದನಿಯೆತ್ತಿದ ಡಿ.ಕೆ .ಸುರೇಶ್‌, ಇದೇ ರೀತಿ ಮಾಡಿದರೆ ನಾವು ಪ್ರತ್ಯೇಕ ರಾಷ್ಟ್ರ ಕೇಳಬೇಕಾದೀತು ಎಂದಿದ್ದು ತಪ್ಪೇ ಎಂದು ಸಿಎಂ ಪ್ರಶ್ನಿಸಿದರು. 
 
ಇದಕ್ಕೆ ಸಿಡಿದೆದ್ದ ಬಿಜೆಪಿ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಅವರು ತೆರಿಗೆ ಬಗ್ಗೆ ಮಾತನಾಡಿದ್ದರು. ದೇಶ ಒಡೆಯುವ ಬಗ್ಗೆ ಮಾತನಾಡಿರಲಿಲ್ಲ. ಕಾಂಗ್ರೆಸ್ ಯಾವತ್ತೂ ದೇಶ ಒಡೆಯುತ್ತದೆ ಎಂದು ಕಿಡಿಕಾರಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಗುಜರಾತ್‌ ಏನು ಭಿಕ್ಷುಕರ ರಾಜ್ಯವೇ ಎಂದು ಟೀಕಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಜೂಜು, ಹುಡುಗಿಯರ ಚಟಕ್ಕೆ ಕಳ್ಳತನಕ್ಕಿಳಿದ ರಿಯಲ್‌ ಎಸ್ಟೇಟ್‌ ಉದ್ಯಮಿ