Select Your Language

Notifications

webdunia
webdunia
webdunia
Wednesday, 9 April 2025
webdunia

ಭ್ರಷ್ಟರ ಪಕ್ಷ ಕಾಂಗ್ರೆಸ್‌ನಲ್ಲಿ ಜೈಲಿಗೆ ಹೋಗಿ ಬಂದವರಿಗೆ ರಾಜಾತಿಥ್ಯ ಗ್ಯಾರಂಟಿ: ಬಿಜೆಪಿ

Valmiki Corporation Scam, Chief Minister Siddaramaiah, BJP Karnataka

Sampriya

ಬೆಂಗಳೂರು , ಗುರುವಾರ, 14 ನವೆಂಬರ್ 2024 (16:57 IST)
ಬೆಂಗಳೂರು: ಭ್ರಷ್ಟರ ಪಕ್ಷ ಕಾಂಗ್ರೆಸ್‌ನಲ್ಲಿ ಜೈಲಿಗೆ ಹೋಗಿ ಬೇಲ್‌ ಮೇಲೆ ಬಂದವರಿಗೆ ರಾಜಾತಿಥ್ಯ ಗ್ಯಾರಂಟಿ. ಜೈಲಿಗೆ ಹೋಗಿ ಬಂದಮೇಲೆಯೇ ಡಿಕೆ ಶಿವಕುಮಾರ್‌  ಅವರಿಗೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷಗಿರಿ, ಡಿಸಿಎಂ ಪಟ್ಟ ಸಿಕ್ಕಿದ್ದು ಎಂದು ಬಿಜೆಪಿ ಕಾಲೆಳೆದಿದೆ.

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ  ಜೈಲಿಗೆ ಹೋಗಿ ಬಂದ ಶಾಸಕ ಬಿ ನಾಗೇಂದ್ರ ಸಚಿವ ಸ್ಥಾನ ನೀಡುವ ಸುಳಿವನ್ನು ಸಿಎಂ ಸಿದ್ದರಾಮಯ್ಯ ನೀಡುತ್ತಿದ್ದ ಹಾಗೇ ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯ ಮಾಡಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.

ಪೋಸ್ಟ್‌ನಲ್ಲಿ ಹೀಗಿದೆ: ಭ್ರಷ್ಟರಿಗೆ ರೋಲ್‌ ಮಾಡೆಲ್‌ ಆಗಿರುವ A1 IPC 420 ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಜೈಲಿಗೆ ಹೋಗಿ ಬೇಲ್‌ ಮೇಲೆ ಹೊರ ಬಂದಿರುವ ಭ್ರಷ್ಟ ನಾಗೇಂದ್ರಗೆ ಮತ್ತೆ ಮಂತ್ರಿ ಗಿರಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಭ್ರಷ್ಟರ ಪಕ್ಷ ಕಾಂಗ್ರೆಸ್‌ನಲ್ಲಿ ಜೈಲಿಗೆ ಹೋಗಿ ಬೇಲ್‌ ಮೇಲೆ ಬಂದವರಿಗೆ ರಾಜಾತಿಥ್ಯ ಗ್ಯಾರಂಟಿ. ಜೈಲಿಗೆ ಹೋಗಿ ಬಂದಮೇಲೆಯೇ ಡಿಕೆ ಶಿವಕುಮಾರ್‌
 ಅವರಿಗೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷಗಿರಿ, ಡಿಸಿಎಂ ಪಟ್ಟ ಸಿಕ್ಕಿದೆ.

ದೇಶವನ್ನು ಲೂಟಿ ಮಾಡುವುದಕ್ಕೆ ಕಾಂಗ್ರೆಸ್‌ಗೆ ಭ್ರಷ್ಟಾಸುರರೇ ಬೇಕು. ನಾಗೇಂದ್ರ ಅವರು ಮತ್ತೆ ಸಚಿವರಾದರೆ, ವಾಲ್ಮೀಕಿ ನಿಗಮವೇ ಇಲ್ಲದಂತೆ ನಾಪತ್ತೆ ಆಗುವುದು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸಂವಿಧಾನವೇ ಓದಿಲ್ಲ ಅದಕ್ಕೇ ಖಾಲಿ ಕಾಣುತ್ತೆ: ರಾಹುಲ್ ಗಾಂಧಿ ಟೀಕೆ