Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ ಶಾಸಕರು ಅಷ್ಟು ದುರ್ಬಲರಾ: ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ.ರವಿ ತಿರುಗೇಟು

ಕಾಂಗ್ರೆಸ್‌ ಶಾಸಕರು ಅಷ್ಟು ದುರ್ಬಲರಾ: ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ.ರವಿ ತಿರುಗೇಟು

Sampriya

ಚಿಕ್ಕಮಗಳೂರು , ಗುರುವಾರ, 14 ನವೆಂಬರ್ 2024 (14:53 IST)
ಚಿಕ್ಕಮಗಳೂರು: ಕಾಂಗ್ರೆಸ್‌ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದು ಹೇಳಿದ್ದಾರೆ.

ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು ಕಿಡಿಕಾರಿದ್ದಾರೆ.

ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ. ಸುಳ್ಳು ಹೇಳದೆ ಇದ್ದರೆ ಊಟವೂ ಜೀರ್ಣ ಆಗಲ್ಲ. ರಾತ್ರಿ ನಿದ್ದೆಯೂ ಬರಲ್ಲ. ಸುಳ್ಳಿಂದಲೇ ರಾಜಕೀಯ ಆರಂಭ ಆಗಿ, ಸುಳ್ಳಿಂದಲೇ ನಿಮ್ಮ ದಿನಚರಿ ಅಂತ್ಯ ಆಗುವ ರೀತಿ ಇದೆ. ಸಾಕ್ಷಿ ಇದ್ದರೆ ನಿರೂಪಿಸಿ, ಇಲ್ಲ ಎಂದರೆ ಸಾರ್ವಜನಿಕವಾಗಿ ಕ್ಷೇಮೆ ಕೇಳಿ ಎಂದು ಒತ್ತಾಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ವಾಯುಮಾಲಿನ್ಯ ಬಗ್ಗೆ ಪ್ರಿಯಾಂಕಾ ಕೆಂಡ: ಗ್ಯಾಸ್ ಚೇಂಬರ್ ಪ್ರವೇಶಿಸಿದಂತಾಯಿತು ಎಂದ ಕೈ ನಾಯಕಿ