Publish Date: Sun, 16 May 2021 (09:55 IST)
Updated Date: Sun, 16 May 2021 (09:57 IST)
ಮುಳಬಾಗಿಲು: ಈ ಕಾಲದಲ್ಲಿ ಒಂದು ಹೆಣ್ಣು ಸಿಗುವುದೇ ಕಷ್ಟ. ಅಂತಹದ್ದರಲ್ಲಿ ಇಲ್ಲೊಬ್ಬ ವರ ಅಕ್ಕನ ಜೊತೆ ತಂಗಿಯನ್ನೂ ಮದುವೆಯಾಗಿದ್ದಾನೆ. ಅದೂ ಒಂದೇ ಮಂಟಪದಲ್ಲಿ!
ಇದು ನಡೆದಿರುವುದು ಮುಳಬಾಗಿಲು ತಾಲೂಕು ತಿಮ್ಮರಾವುತನಹಳ್ಳಿಯಲ್ಲಿ. ಮೇ 7 ರಂದು ಈ ವಿಶಿಷ್ಟ ಜೋಡಿಯ ವಿವಾಹ ಕಾರ್ಯಕ್ರಮ ನೆರವೇರಿತ್ತು. ಈ ವಿಶೇಷ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ ಉಮಾಪತಿ ವಧುವಿನ ಕುಟುಂಬದ ಸಂಬಂಧಿಕನೇ. ಈತ ತಂಗಿಯನ್ನು ಮೆಚ್ಚಿಕೊಂಡಿದ್ದ. ಆದರೆ ತಂಗಿ ಮಾತು ಬಾರದ ಅಕ್ಕನನ್ನು ಮದುವೆಯಾದರೆ ಮಾತ್ರ ಮದುವೆಯಾಗುವುದಾಗಿ ಷರತ್ತು ಹಾಕಿದ್ದಳು. ಹೀಗಾಗಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ವರ ವಿವಾಹವಾಗಿದ್ದಾನೆ. ವಿಶೇಷವೆಂದರೆ ಈ ವಧುವಿನ ತಾಯಿಯಂದಿರೂ ಅಕ್ಕ-ತಂಗಿಯರಾಗಿದ್ದು, ಒಬ್ಬರನ್ನೇ ಮದುವೆಯಾಗಿದ್ದರು.