Select Your Language

Notifications

webdunia
webdunia
webdunia
webdunia

ಕೊವಿಡ್ ಸೋಂಕಿತರ ಮನರಂಜನೆಗಾಗಿ ನೃತ್ಯ ಮಾಡಿದ ಶಾಸಕ ಅನ್ನದಾನಿ

ಕೊವಿಡ್ ಸೋಂಕಿತರ ಮನರಂಜನೆಗಾಗಿ ನೃತ್ಯ ಮಾಡಿದ ಶಾಸಕ ಅನ್ನದಾನಿ
ಮಂಡ್ಯ , ಶನಿವಾರ, 15 ಮೇ 2021 (10:43 IST)
ಮಂಡ್ಯ: ಕೊವಿಡ್ ಸೋಂಕಿತರಿಗೆ ಶಾಸಕರುಗಳು ವೈದ್ಯಕೀಯ ನೆರವು ನೀಡಿರುವ ಘಟನೆಗಳನ್ನು ಓದಿದ್ದೇವೆ. ಆದರೆ ಮಳವಳ್ಳಿ ಶಾಸಕ ಜೆಡಿಎಸ್ ನ ಅನ್ನದಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.


ಕೊವಿಡ್ ಸೋಂಕಿತರಿಗಾಗಿ ಅನ್ನದಾನಿ ನೃತ್ಯ ಮಾಡಿ ಮನರಂಜಿಸುವ ಕೆಲಸ ಮಾಡಿದ್ದಾರೆ. ಸೋಂಕಿತರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಉದ್ದೇಶದಿಂದ ಅವರ ಜೊತೆಗೇ ನೃತ್ಯ ಮಾಡಿದ್ದಾರೆ.

ಮಳವಳ್ಳಿ ಪಟ್ಟಣದ ಕೆಎಸ್ ಆರ್ ಟಿಸಿ ತರಬೇತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗಾಗಿ ಶಾಸಕರು ಈ ಮನರಂಜನೆ ನೀಡಿದ್ದಾರೆ. ಜಾನಪದ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಕನ್ನಡ, ಕೇರಳ ಗಡಿಭಾಗಗಳಲ್ಲಿ ಇಂದು ಭಾರೀ ಮಳೆ