Select Your Language

Notifications

webdunia
webdunia
webdunia
webdunia

ಕೊರೋನಾ ಹೋರಾಟಕ್ಕೆ ಕ್ರಿಕೆಟಿಗ ಹನುಮ ವಿಹಾರಿ ಮಾಡಿದ ಕೆಲಸ ಮೆಚ್ಚಲೇಬೇಕು!

ಕೊರೋನಾ ಹೋರಾಟಕ್ಕೆ ಕ್ರಿಕೆಟಿಗ ಹನುಮ ವಿಹಾರಿ ಮಾಡಿದ ಕೆಲಸ ಮೆಚ್ಚಲೇಬೇಕು!
ಮುಂಬೈ , ಶನಿವಾರ, 15 ಮೇ 2021 (08:50 IST)
ಮುಂಬೈ: ಕೊರೋನಾ ವಿರುದ್ಧದ ಹೋರಾಟಕ್ಕೆ ಕ್ರಿಕೆಟಿಗರು ದೇಣಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿ ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಹನುಮ ವಿಹಾರಿ ತಮ್ಮದೇ 100 ಜನ ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಆಕ್ಸಿಜನ್, ವೆಂಟಿಲೇಟರ್, ಔಷಧಿ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.

‘ಇದೆಲ್ಲವನ್ನೂ ನಾನು ನನ್ನನ್ನು ವೈಭವೀಕರಿಸಲು ಮಾಡುತ್ತಿಲ್ಲ. ಸ್ಥಳೀಯ ಜನರಿಗೆ ನೆರವಾಗುವ ದೃಷ್ಟಿಯಿಂದ ನನ್ನ ಕೈಲಾದ ಕೆಲಸ ಮಾಡುತ್ತಿದ್ದೇನೆ. ಇದು ಕೇವಲ ಆರಂಭವಷ್ಟೇ’ ಎಂದು ಹನುಮ ವಿಹಾರಿ ಹೇಳಿದ್ದಾರೆ. ಅಷ್ಟೇ ಅಲ್ಲ, ಟ್ವಿಟರ್ ನಲ್ಲಿ ತಮಗೆ ಸಹಾಯಕ್ಕೆ ಮೊರೆ ಇಟ್ಟವರಿಗೆ ಸಹಾಯ ಮಾಡುತ್ತಿದ್ದಾರೆ. ಪ್ರಚಾರದ ಹಂಗಿಲ್ಲದೇ ಅವರು ಮಾಡುತ್ತಿರುವ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ದೇಣಿಗೆ ಒಟ್ಟುಗೂಡಿದ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ