Publish Date: Thu, 13 May 2021 (10:33 IST)
Updated Date: Thu, 13 May 2021 (10:35 IST)
ಮುಂಬೈ: ಭಾರತ ಯುವ ತಂಡದ ಕೋಚ್ ಆಗಿ ದ್ರಾವಿಡ್ ಯಶಸ್ವಿಯಾಗಲು ಆಸ್ಟ್ರೇಲಿಯಾದ ಸೂತ್ರ ಅನುಸರಿಸಿರುವುದೇ ಕಾರಣ ಎಂದು ಮಾಜಿ ಕೋಚ್ ಗ್ರೆಗ್ ಚಾಪೆಲ್ ಕೊಚ್ಚಿಕೊಂಡಿದ್ದಾರೆ.
ದ್ರಾವಿಡ್ ಎ ಮತ್ತು ಅಂಡರ್ 19 ತಂಡದ ಕೋಚ್ ಆಗಿ ಅನೇಕ ಯುವಪ್ರತಿಭೆಗಳನ್ನು ಟೀಂ ಇಂಡಿಯಾಕ್ಕೆ ನೀಡಿದ್ದಾರೆ. ಈ ರೀತಿ ಯುವ ತಂಡವನ್ನು ರಚಿಸಲು ದ್ರಾವಿಡ್ ಆಸ್ಟ್ರೇಲಿಯಾ ಮಾದರಿ ಬಳಸಿದ್ದಾರೆ ಎಂದಿದ್ದಾರೆ ಚಾಪೆಲ್.
ಭಾರತ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಆಡಿದ ತಂಡವನ್ನು ನೋಡಿ ಇದು ಸೆಕೆಂಡ್ ಇಲೆವೆನ್ ಎಂದಿದ್ದರು. ಆದರೆ ಅವರೆಲ್ಲರೂ ಪ್ರತಿಭಾವಂತರಾಗಿದ್ದರು. ಪ್ರತಿಭೆ ಹುಡುಕಾಟದಲ್ಲಿ ಇಂಗ್ಲೆಂಡ್ ಮತ್ತು ಭಾರತ ನಮಗಿಂತ ಮುಂದಿದೆ ಎಂದಿದ್ದಾರೆ.