Publish Date: Wed, 12 May 2021 (10:03 IST)
Updated Date: Wed, 12 May 2021 (10:05 IST)
ಮುಂಬೈ: ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ಶಿಖರ್ ಧವನ್ ನಾಯಕತ್ವ ವಹಿಸುವ ಸಾಧ್ಯತೆಯಿದೆ.
ಹಿರಿಯ ಕ್ರಿಕೆಟಿಗ ಎನ್ನುವ ಕಾರಣ ಅವರಿಗೆ ಮನ್ನಣೆ ಸಿಗುವ ಸಾಧ‍್ಯತೆಯಿದೆ. ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮತ್ತೊಂದು ತಂಡ ಶ್ರೀಲಂಕಾದಲ್ಲಿ ಸೀಮಿತ ಓವರ್ ಗಳ ಸರಣಿ ಆಡಲಿದೆ.
ಈ ಸರಣಿಗೆ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನೊಂದೆಡೆ ಶಿಖರ್ ಧವನ್ ಅಥವಾ ಭುವನೇಶ್ವರ್ ಕುಮಾರ್ ಗೆ ನಾಯಕತ್ವ ವಹಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ. ಕೆಎಲ್ ರಾಹುಲ್ ಫಿಟ್ ನೆಸ್ ಸಾಬೀತುಪಡಿಸಿದರೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಧವನ್ ನಾಯಕತ್ವಕ್ಕೆ ಮುಂಚೂಣಿಯಲ್ಲಿದ್ದಾರೆ.