Publish Date: Wed, 12 May 2021 (09:14 IST)
Updated Date: Wed, 12 May 2021 (09:16 IST)
ಮುಂಬೈ: ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತ ವಿರಾಟ್ ಕೊಹ್ಲಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಸರಣಿ ವೇಳೆ ಸಿರಾಜ್ ತಾವು ಅತ್ಯಂತ ಪ್ರೀತಿಸುತ್ತಿದ್ದ, ವೃತ್ತಿ ಜೀವನಕ್ಕೆ ಪ್ರೋತ್ಸಾಹ ನೀಡಿದ್ದ ತಂದೆಯನ್ನು ಕಳೆದುಕೊಂಡಿದ್ದರು. ಆದರೆ ಸಿರಾಜ್ ಅನಿವಾರ್ಯವಾಗಿ ತಂದೆಯ ಅಂತಿಮ ದರ್ಶನ ಪಡೆಯಲು ಭಾರತಕ್ಕೆ ಬರಲಾಗಲಿಲ್ಲ.
ಈ ವೇಳೆ ಹೋಟೆಲ್ ಕೊಠಡಿಯಲ್ಲಿ ಕೂತು ಅಳುತ್ತಿದ್ದ ಸಿರಾಜ್ ರನ್ನು ನೋಡಿ ವಿರಾಟ್ ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಜೊತೆಗೆ ಏನೇ ಬಂದರೂ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದರಂತೆ. ಆಗ ಮಾತ್ರವಲ್ಲ, ಆ ಸರಣಿಯಲ್ಲಿ ಒಂದು ಪಂದ್ಯವಾಡಿ ಕೊಹ್ಲಿ ತವರಿಗೆ ಹೋದ ಬಳಿಕವೂ ಫೋನ್ ಸಂದೇಶದ ಮೂಲಕ ಹುರಿದುಂಬಿಸುತ್ತಲೇ ಇದ್ದರಂತೆ. ನನ್ನ ವೃತ್ತಿಜೀವನದಲ್ಲಿ ಅವರಿಗೆ ನಾನು ಅಭಾರಿ ಎಂದು ಸಿರಾಜ್ ಹೇಳಿಕೊಂಡಿದ್ದಾರೆ.