ಮುಂಬೈ: ವಿರಾಟ್ ಕೊಹ್ಲಿ, ರೋಹಿತ್ ಮುಂತಾದ ದಿಗ್ಗಜರ ಅನುಪಸ್ಥಿತಿಯಲ್ಲಿ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಲಿದ್ದಾರೆಯೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ.
ವಿರಾಟ್ ಕೊಹ್ಲಿ ನಾಯಕತ್ವದ ಇನ್ನೊಂದು ತಂಡ ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಟೀಂ ಇಂಡಿಯಾದ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಸೀಮಿತ ಓವರ್ ಗಳ ಸರಣಿ ಆಡಲಿದೆ.
ಇಂಗ್ಲೆಂಡ್ ನಲ್ಲಿ ಆಡುವ ತಂಡಕ್ಕೆ ರವಿಶಾಸ್ತ್ರಿಯೇ ಕೋಚ್ ಆಗಿರುತ್ತಾರೆ. ಆದರೆ ಲಂಕಾದಲ್ಲಿ ಆಡಲಿರುವ ಯುವಕರ ತಂಡಕ್ಕೆ ದ್ರಾವಿಡ್ ಕೋಚ್ ಆಗುತ್ತಾರೆಂಬ ಸುದ್ದಿಯಿದೆ. ಯುವಕರ ತಂಡವನ್ನು ಪಳಗಿಸುವುದರಲ್ಲಿ ರಾಹುಲ್ ದ್ರಾವಿಡ್ ನಿಸ್ಸೀಮ. ಹೀಗಾಗಿ ಅವರನ್ನೇ ಮುಖ್ಯ ಕೋಚ್ ಆಗಿ ಲಂಕಾಗೆ ಕಳುಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!