Publish Date: Sun, 16 May 2021 (09:14 IST)
Updated Date: Sun, 16 May 2021 (09:16 IST)
ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಕರಾವಳಿ ಜನ ಭೀತಿಯಲ್ಲಿ ಕಳೆಯುವಂತಾಗಿದೆ.
ನಿನ್ನೆ ಬೆಳಿಗ್ಗೆಯಿಂದಲೇ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗುತ್ತಿದೆ. ಪರಿಣಾಮ ಕಡಲು ಉಕ್ಕಿ ಅಬ್ಬರಿಸುತ್ತಿದೆ.
ಮಲ್ಪೆ ತೀರ ಪ್ರದೇಶ ಮುಳುಗಿ ಹೋಗಿದೆ. ಕಡಲ ಕಿನಾರೆಯಲ್ಲಿ ಭಾರೀ ಗಾತ್ರದ ಅಲೆಗಳಿಂದಾಗಿ ತೀರ ಪ್ರದೇಶದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಡಲ್ಕೊರೆತದಿಂದಾಗಿ ಹಲವು ಮನೆಗಳು ಅಪಾಯದಲ್ಲಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರು ದಿನ ಮಳೆ ಸುರಿಯುವ ಸಾಧ್ಯತೆಯಿದೆ.