ಹೆಣ್ಣುಮಗುವೆಂಬ ಕಾರಣಕ್ಕೆ ಅಜ್ಜಿ ಎಸಗಿದ್ದಾಳೆ ಇಂತಹ ಘೋರ ಕೃತ್ಯ

ಭಾನುವಾರ, 1 ಡಿಸೆಂಬರ್ 2019 (11:47 IST)
ಬೆಂಗಳೂರು : 8 ದಿನದ ಹೆಣ್ಣುಮಗುವನ್ನು  ಅಜ್ಜಿಯೇ ಮಹಡಿಯಿಂದ ಎಸೆದು ಭೀಕರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಪರಮೇಶ್ವರಿ (60)ಮಗುವನ್ನು ಕೊಂದ ಪಾಪಿ ಅಜ್ಜಿ. ಮಾರ್ಷಲ್ ಮತ್ತು ಸೆಲ್ವಿ ದಂಪತಿ 8 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ  ಸೆಲ್ವಿ ಬಾತ್ ರೂಂ ಗೆ ಹೋಗುವಾಗ ಮಾರ್ಷಲ್ ತಾಯಿ ಪರಮೇಶ್ವರಿಯ ಬಳಿ ಮಗುವನ್ನು ಬಿಟ್ಟು ನೋಡಿಕೊಳ‍್ಳುವಂತೆ ಹೇಳಿ ಹೋಗಿದ್ದಾಳೆ. ಆ ವೇಳೆ ಅಜ್ಜಿ ಹೆಣ್ಣುಮಗುವೆಂಬ ಕೀಳರಿಮೆಯಿಂದ ಮಗುವನ್ನು ಮಹಡಿಯಿಂದು ಎಸೆದಿದ್ದಾಳೆ.


ಬಾತ್ ರೂಂನಿಂದ ಬಂದ ತಾಯಿ ಸಲ್ವಿ ಮಗುವನ್ನು ಕೇಳಿದಾಗ ಅಜ್ಜಿ ತನಗೆ ಗೊತ್ತಿಲ್ಲ ಎಂಬಂತೆ ನಟಿಸಿದ್ದಾಳೆ. ಬಳಿಕ ಮಗುವನ್ನು ಹುಡುಕಾಡಿದಾಗ ಮನೆ ಸಮೀಪದ ಖಾಲಿ ನಿವೇಶನದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಅಜ್ಜಿ ಪರಮೇಶ್ವರಿಯನ್ನು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹೇಶ್ ಕುಮಟಳ್ಳಿ ಬಗ್ಗೆ ಟೀಕೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಯತ್ನಾಳ್