Select Your Language

Notifications

webdunia
webdunia
webdunia
Friday, 11 April 2025
webdunia

`ದಲಿತ` ಪದ ಬಳಸದಂತೆ ಸರಕಾರದ ಆದೇಶ

ದಲಿತ ಪದ
ಬೆಂಗಳೂರು , ಗುರುವಾರ, 4 ಜೂನ್ 2020 (19:25 IST)
ದಲಿತ, ಹರಿಜನ, ಗಿರಿಜನ ಎನ್ನುವ ಪದಗಳನ್ನು ಇನ್ಮುಂದೆ ಬಳಸುವಂತಿಲ್ಲ.

ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ  ನಿರ್ದೇಶನದಂತೆ  ರಾಜ್ಯದಲ್ಲಿ  ಆಡಳಿತ ಭಾಷೆ, ಪತ್ರವ್ಯವಹಾರ, ಪ್ರಮಾಣ ಪತ್ರಗಳಲ್ಲಿ `ದಲಿತ’ ಎನ್ನುವ ಪದವನ್ನು ಬಳಸದಂತೆ  ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡಬಾರದು. ಆಂಗ್ಲ ಭಾಷೆಯಲ್ಲಿ ಎಸ್‍ಸಿ, ಎಸ್‍ಟಿ ಎಂದು ನಮೂದಿಸಬಹುದಾಗಿದೆ. ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು  ಬಳಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎಂದು ನಮೂದಿಸಬಹುದಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ರೋಮ್ಯಾನ್ಸ್ ಗೆ ಕೊರೊನಾ ಅಡ್ಡಿಯಾಗಬಹುದು