Select Your Language

Notifications

webdunia
webdunia
webdunia
webdunia

ಶಾಲಾ ಶುಲ್ಕ ಹೆಚ್ಚಳ : ಸುತ್ತೋಲೆ ಹೊರಡಿಸಿದ ಸರಕಾರ

ಶಾಲಾ ಶುಲ್ಕ ಹೆಚ್ಚಳ : ಸುತ್ತೋಲೆ ಹೊರಡಿಸಿದ ಸರಕಾರ
ಧಾರವಾಡ , ಮಂಗಳವಾರ, 2 ಜೂನ್ 2020 (21:49 IST)
ಶಾಲಾ –ಕಾಲೇಜ್ ಗಳ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಈ ಬಾರಿ ಮಾನವೀಯತೆ ಆಧಾರದ ಮೇಲೆ ಶಾಲಾ, ಕಾಲೇಜುಗಳು ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡದಂತೆ ಸುತ್ತೋಲೆ ನೀಡಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.

ಕೊರೊನಾದಿಂದಾಗಿ ಮಧ್ಯಮ ಹಾಗೂ ಬಡವರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಶುಲ್ಕವನ್ನು ಮಾನವೀಯತೆ ಆಧಾರದ ಮೇಲೆ ಹೆಚ್ಚಳ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ. ಈ ಸಂಬಂಧ ಸಹಾಯವಾಣಿಯನ್ನೂ ಆರಂಭಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಬಾಕಿ ಇರುವ ಶುಲ್ಕವನ್ನು ಪಾವತಿ ಮಾಡುವಂತೆ ಶಾಲಾ, ಕಾಲೇಜುಗಳು ಒತ್ತಡ ಹೇರಬಾರದು. ಯಾರು ಶಕ್ತರಿರುತ್ತಾರೋ ಅವರಾಗೇ ಶುಲ್ಕ ಪಾವತಿ ಮಾಡಲು ಬಂದರೆ  ಶುಲ್ಕ ಪಾವತಿ ಮಾಡಿಕೊಳ್ಳಿ ಎಂದು ಹೇಳಿದ್ದೇವೆ. ಶಕ್ತರಲ್ಲದವರಿಗೆ ಸದ್ಯಕ್ಕೆ ಶುಲ್ಕ ಪಾವತಿ ಮಾಡುವಂತೆ ಒತ್ತಡ ಹೇರಬಾರದು ಎಂದು ಹೇಳಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೆತ್ತವರನ್ನೇ ಕೊಲೆ ಮಾಡಿದ ಪಾಪಿ ಮಗ