Select Your Language

Notifications

webdunia
webdunia
webdunia
Tuesday, 8 April 2025
webdunia

ಪಟಾಕಿ ರೋಲ್ ಕಾಲ್ ನೀಡದಕ್ಕೆ ಬಿಜೆಪಿ ಮುಖಂಡನಿಂದ ಗೂಂಡಾಗಿರಿ

Gooned by BJP leader for not giving firework roll call
ಹೊಸೂರು , ಮಂಗಳವಾರ, 25 ಅಕ್ಟೋಬರ್ 2022 (20:46 IST)
ಬಿಜೆಪಿ  ಪುರಸಭೆ ಸದಸ್ಯೆ ಪತಿ ಹಾಗೂ ಬಿಜೆಪಿ ಮುಖಂಡ ಚರಣ್ ಹಾಗೂ ಆತ‌ನ ಪಟಾಲಂ  ಪಟಾಕಿ ಅಂಗಡಿ ಮಾಲೀಕರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ.ಹೊಸೂರು ಮುಖ್ಯರಸ್ತೆ ನೆರಳೂರು ಗೇಟ್ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಹಲ್ಲೆಯ  ದೃಶ್ಯಗಳು ‌ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಸ್ಎಲ್ ವಿ ಕ್ರಾಕರ್ಸ್ ನ ಕಿರಣ್ ಮತ್ತು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು,ಚರಣ್ ಅಂಗಡಿಯವರಿಗೆ ಪಟಾಕಿ ನೀಡುವಂತೆ ಮೊದಲು ಧಮ್ಕಿ ಹಾಕಿದ್ದಾನೆ. ಇದಕ್ಕೆ ಮಾಲೀಕರು ನಿರಾಕರಣೆ ಮಾಡಿದ್ದಕ್ಕೆ  ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರೋದಾಗಿ ಆರೋಪಿಸಿದ್ದಾರೆ .ಚಂದಾಪುರ ಪುರಸಭೆ ಸದಸ್ಯೆ ಪತಿ ಚರಣ್ ಅಂಡ್ ಟೀಮ್ ನಿಂದ ಹಲ್ಲೆ ಯಾಗಿದ್ದು ಸದ್ಯ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿಚರಣ್, ತೇಜಸ್, ಹರೀಶ್ ಗುರುರಾಜ್ ಸೇರಿದಂತೆ ಹತ್ತಕ್ಕೂ ಅಧಿಕ‌ ಮೇಲೆ ದೂರು ದಾಖಲಾಗಿದೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ.೦೨ಕ್ಕೆ ಕೊಪ್ಪದಲ್ಲಿ ಕ್ಷೇತ್ರ ಮಟ್ಟದ ಅಡಿಕೆ ಬೆಳೆಗಾರರ ಸಭೆ