Select Your Language

Notifications

webdunia
webdunia
webdunia
webdunia

ರಥಯಾತ್ರೆಗೆ ರೆಡಿಯಾಗಿದೆ ವಿಶೇಷ ಬಸ್..!

ರಥಯಾತ್ರೆಗೆ ರೆಡಿಯಾಗಿದೆ ವಿಶೇಷ ಬಸ್..!
bangalore , ಮಂಗಳವಾರ, 25 ಅಕ್ಟೋಬರ್ 2022 (20:35 IST)
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವೆಂಬರ್ ೧ ರಿಂದಲೇ ಏಕಾಂಗಿ ರಥಯಾತ್ರೆಗೆ ನಿರ್ಧರಿಸಿದ್ದರು.ಅದಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಿಸಿಕೊಂಡಿದ್ರು.ಆದ್ರೆ ಏಕಾಂಗಿಯಾಗಿ ಯಾತ್ರೆ ಆರಂಭಿಸಿದ್ರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ನಾಯಕರಿಗೆ ಬುದ್ಧಿವಾದ ಹೇಳಿದ್ರು.ಇಬ್ಬರು ಪ್ರತ್ಯೇಕವಾಗಿ ಬೇಡ,ಸಾಮೂಹಿಕ ನಾಯಕತ್ವದಡಿಯಲ್ಲೇ ರಥಯಾತ್ರೆ,ಕಾರ್ಯಕ್ರಮಗಳನ್ನ ಮಾಡಿ ಅಂತ ಸಲಹೆ ಕೊಟ್ಟಿದ್ದಾರೆ.ಹೀಗಾಗಿ ನವೆಂಬರ್ ೧೫ ರ ನಂತರ ಸಾಮೂಹಿಕ ನಾಯಕತ್ವದಲ್ಲಿ ರಥಯಾತ್ರೆಗೆ ಸಿದ್ದರಾಮಯ್ಯ ಒಪ್ಪಿದ್ದಾರೆ..ಕೆಲವು ಕಡೆ ಡಿಕೆಶಿ,ಸಿದ್ರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಪ್ರವಾಸ ಮಾಡ್ತಾರೆ.ಇನ್ನು ಕೆಲವು ವೇಳೆ ಸಿದ್ರಾಮಯ್ಯ ಹಳೆ ಮೈಸೂರು ಭಾಗದಿಂದ ರಥಯಾತ್ರೆ ಶುರುಮಾಡಿದ್ರೆ,ಡಿಕೆಶಿ ಮಧ್ಯ ಕರ್ನಾಟಕದಿಂದ ರಥಯಾತ್ರೆ ಮಾಡಲಿದ್ದಾರೆ.ಪರಮೇಶ್ವರ್ ನೇತೃತ್ವದ ತಂಡವೂ ಹಲವು ಕಡೆ ಪ್ರವಾಸ ಮಾಡಲಿದೆ.ಎಲ್ಲ ನಾಯಕರು ಇದ್ರಲ್ಲಿ ಭಾಗವಹಿಸಲಿದ್ದಾರೆ.ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂಬ ಮೆಸೇಜನ್ನ ರವಾನಿಸುವುದು ಇದರ ಹಿಂದಿರುವ ಉದ್ದೇಶ.ಜೊತೆಗೆ ರಾಜ್ಯದ ಜನರನ್ನ ಪಕ್ಷದತ್ತ ಸೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ.
 
ಒಂದು ಕಡೆ ರಥಯಾತ್ರೆಯನ್ನ ಹಮ್ಮಿಕೊಂಡ್ರೆ,ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಕಾರ್ಯಕ್ರಮದ ಮೂಲಕ ಶಕ್ತಿಪ್ರದರ್ಶನಕ್ಕೂ ಕೈ ನಾಯಕರು ಮುಂದಾಗಿದ್ದಾರೆ.ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಬೃಹತ್ ಸಮಾವೇಶಗಳನ್ನ ಆಯೋಜಿಸುವುದು.ದಲಿತ ಹಾಗೂ‌ ಹಿಂದುಳಿದ ವರ್ಗಗಳ‌ಮತಗಳನ್ನ ಸೆಳೆಯುವ ಉದ್ದೇಶವನ್ನ ಇಟ್ಕೊಳ್ಳಲಾಗಿದೆ.ಶೀಘ್ರದಲ್ಲೇ ಇದರ ಸಮಯವನ್ನೂ ಪ್ರಕಟಿಸೋಕೆ ಕೈ ನಾಯಕರು ವೇದಿಕೆ ರೆಡಿಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಪಾದಯಾತ್ರೆ ಬಳಿಕ ನವೆಂಬರ್ ನಲ್ಲಿ ನಡೆಯಲಿರುವ ಮತ್ತೊಂದು ಯಾತ್ರೆ..!