Select Your Language

Notifications

webdunia
webdunia
webdunia
webdunia

ಉದ್ಯೋಗ ಆಕಾಂಕ್ಷಿಗಳಿಗೆ ದೂರದರ್ಶನ ಕೇಂದ್ರದಿಂದ ಗುಡ್‌ನ್ಯೂಸ್‌

Doordarshan Recruitment 2025, Doordarshan New Job, Media Field Job

Sampriya

ಬೆಂಗಳೂರು , ಶನಿವಾರ, 18 ಜನವರಿ 2025 (19:41 IST)
Photo Courtesy X
ಬೆಂಗಳೂರು: ಸುದ್ದಿ ವಿಭಾಗದಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ ಆಕಾಂಕ್ಷಿಗಳಿಗೆ ಬೆಂಗಳೂರು ಪ್ರಸಾರ ಭಾರತಿ ದೂರದರ್ಶನದಲ್ಲಿ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಇಲ್ಲಿನ ಖಾಲಿಯಿರುವ ಸೀನಿಯರ್​ ಕರೆಸ್ಪಾಡೆಂಟ್ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸುದ್ದಿ ವಿಭಾಗದಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಹುದ್ದೆಯನ್ನು ಎರಡು ವರ್ಷದ ಗುತ್ತಿಗೆ ಅವಧಿ ಮೇರೆಗೆ ನೇಮಕ ಮಾಡಲಾಗುವುದು. ಆಯ್ಕೆಯಾದವರಿಗೆ ಮಾಸಿಕ 80,000 ದಿಂದ 1,25,000 ವೇತನ ನಿಗದಿಪಡಿಸಲಾಗಿದೆ. ಇದೇ 31ರಂದು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ.

ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್​ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. applications.prasarbharati.org ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಶಾರ್ಟ್‌​ಲಿಸ್ಟ್​ ಆದ ಅಭ್ಯರ್ಥಿಗಳನ್ನು ಇಮೇಲ್​​ ಮೂಲಕ ಸಂಪರ್ಕಿಸಲಾಗುತ್ತದೆ. ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prasarbharati.gov.inಗೆ ಭೇಟಿ ನೀಡಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ, ಸಾವಿನ ಸುತ್ತಾ ಹಲವು ಅನುಮಾನ