Select Your Language

Notifications

webdunia
webdunia
webdunia
webdunia

ಜನತೆಗೆ ಸಂತಸದ ಸುದ್ದಿ: ಇನ್ನು ಮುಂದೆ ಪಡಿತರ ಅಂಗಡಿಗಳಲ್ಲೂ ಆ ಸೇವೆಗಳು

ಜನತೆಗೆ ಸಂತಸದ ಸುದ್ದಿ: ಇನ್ನು ಮುಂದೆ ಪಡಿತರ ಅಂಗಡಿಗಳಲ್ಲೂ ಆ ಸೇವೆಗಳು
bangalore , ಸೋಮವಾರ, 21 ಫೆಬ್ರವರಿ 2022 (18:08 IST)
ದೇಶದಲ್ಲಿ ಪಡಿತರ ಸಾಮಗ್ರಿಗಳನ್ನು ಒದಗಿಸುವ ರೇಷನ್ ಅಂಗಡಿಗಳು ಇನ್ನು ಮುಂದೆ ಹಣಕಾಸು ಸೇವೆಗಳನ್ನು ನೀಡಲಿವೆ. ಬ್ಯುಸಿನೆಸ್ ಕರೆಸ್ಪಾಂಡಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುವರು. ಇವು ಮುದ್ರಾ ಲೋನ್ ನೀಡಲು ಸಹಾಯ ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲು, ಆರ್ಥಿಕ ಸೇರ್ಪಡೆಗಾಗಿ ಪಡಿತರ ವ್ಯಾಪಾರಿಗಳಿಗೆ ಈ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಇದು FPS ಸ್ಟೋರ್‌ಗಳಿಗೆ ಹಣಕಾಸು ಸೇವೆಗಳನ್ನು ಒದಗಿಸಲು ಮತ್ತು ಹೆಚ್ಚುವರಿ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.
ಪ್ರಸ್ತುತ 3 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು (CSC) ಜನರಿಗೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತವೆ. ಆಧಾರ್, ಪ್ಯಾನ್ ಕಾರ್ಡ್ ನೋಂದಣಿಗಳು, ರೈಲು ಟಿಕೆಟ್ ಬುಕಿಂಗ್, ಸಂಗೀತ ಡೌನ್‌ಲೋಡ್‌ಗಳು, ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ, ಆದಾಯ ತೆರಿಗೆ ಸೇವೆಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಒದಗಿಸುತ್ತವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MITE) ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ಸಿಎಸ್‌ಸಿಗಳ ಸಂಖ್ಯೆಯನ್ನು ಆರು ಲಕ್ಷ ಹಳ್ಳಿಗಳಿಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರಸ್ತುತ 8,000 CSCಗಳು FPS ನೊಂದಿಗೆ ಸಂಯೋಜಿತವಾಗಿದ್ದು,.ಮುಂದಿನ ವರ್ಷದ ವೇಳೆಗೆ ಇನ್ನೂ 10,000 ಕೇಂದ್ರಗಳನ್ನು ಎಫ್‌ಪಿಎಸ್ ಔಟ್‌ಲೆಟ್‌ಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಿಂದ ದೂರದ ಪ್ರದೇಶಗಳಿಗೂ ಹಣಕಾಸು ಸೇವೆಗಳನ್ನು ತಲುಪಲು ಅನುವು ಮಾಡಿಕೊಡಲಾಗುತ್ತದೆ.
ಮೈಟಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗಳ ಇಲಾಖೆ ಎಫ್‌ಪಿಎಸ್‌ಗಳನನ್ನಾಗಿ ಸಿಎಸ್‌ಸಿಗಳಾಗಿ ಪರಿವರ್ತಿಸಲು ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಪ್ರಸ್ತುತ ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ಏಕ-ಐಟಂ ಪಡಿತರ ಸರಕುಗಳು ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ.
ಪ್ರಸ್ತುತ, 5.34 ಲಕ್ಷ ಎಫ್‌ಪಿಎಸ್‌ಗಳು ದೇಶದಲ್ಲಿ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 60 ರಿಂದ 70 ಮಿಲಿಯನ್ ಟನ್ ಸಬ್ಸಿಡಿ ಆಹಾರ ಧಾನ್ಯಗಳನ್ನು ವಿತರಿಸುತ್ತಿವೆ. ಈ ಔಟ್‌ಲೆಟ್‌ಗಳಿಗೆ ಬರುವ ಹೆಚ್ಚಿನ ಜನರು ಎಫ್‌ಪಿಎಸ್‌ನಿಂದ ಆದಾಯವನ್ನು ಗಳಿಸಬಹುದು ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರುಗಳ ಮುಖಾಮುಖಿ ಡಿಕ್ಕಿ; ಮಡಿಕೇರಿ ನಿವಾಸಿ ಮೃತ್ಯು - ಹಲವು ಜನರಿಗೆ ಗಂಭೀರ ಗಾಯ