Publish Date: Mon, 21 Feb 2022 (14:17 IST)
Updated Date: Mon, 21 Feb 2022 (16:19 IST)
ಚಿಕ್ಕೋಡಿ : ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ, ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಗೋಕಾಕ್ ಪಟ್ಟಣದಲ್ಲಿ ಪಿಯು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನ ಬಹಿಷ್ಕರಿಸಿದ್ದಾರೆ.
ಕಾಲೇಜುಗಳಲ್ಲಿ ಬೇರೆ ಕೋಮಿನ ವಿದ್ಯಾರ್ಥಿಗಳು ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ. ನಮಗೆ ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಹಿಜಬ್ ಬೆಂಬಲಿತ ವಿದ್ಯಾರ್ಥನಿಯರು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ತರಗತಿಗಳಿಗೆ ತೆರಳದೆ ಶಾಲೆಯ ಗೇಟ್ ಹೊರಗಡೆ ನಿಂತು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.