Publish Date: Mon, 21 Feb 2022 (18:03 IST)
Updated Date: Mon, 21 Feb 2022 (18:07 IST)
ಮಾಣಿ-ಮೈಸೂರು ರಸ್ತೆಯ ಪುತ್ತೂರು ತಾಲ್ಲೂಕಿನ ಕಾವು ಸಮೀಪದ ಕೌಡಿಚ್ಚಾರ್ ಮದ್ಯಂಗಲ ಎಂಬಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಮಡಿಕೇರಿ ನಿವಾಸಿ ಮೃತ ಪಟ್ಟು ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಫೆ.20 ರಂದು ನಡೆದಿದೆ.
ಮಡಿಕೇರಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಡಿಕೇರಿ ಕಡೆ ಹೋಗುತ್ತಿದ್ದ ಐ20 ಕಾರು ನಡುವೆ ಅಪಘಾತ ಸಂಭವಿಸಿದೆ.
ವ್ಯಕ್ತಿ ವ್ಯಕ್ತಿಯನ್ನು ಮಡಿಕೇರಿ ನಿವಾಸಿ ರಾಜು ಎಂದು ಗುರುತಿಸಲಾಗಿದೆ.
ಸ್ವಿಫ್ಟ್ ಕಾರಿನ ಚಾಲಕನನ್ನು ಮಂಗಳೂರಿನ ಕೈಕಂಬ ಮೊಯಿದ್ದಿನ್ ಕುಂಜಿ ಎಂದು ಗುರುತಿಸಲಾಗಿದೆ.
ಮಂಗಳೂರಿನ ಬಜ್ಪೆ ಮೂಲದ ಕುಟುಂಬ ಮಡಿಕೇರಿ ಪ್ರವಾಸಿ ತಾಣಗಳಿಗೆ ತೆರಳಿದ್ದು ಮರಳಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬಜ್ಪೆ ಮೂಲದ ಜ್ಯೋತಿ ಎಂಬವರು ಗಂಭೀರ ಗಾಯಗೊಂಡಿದ್ದು ದೀಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದ ನೇತ್ರಾವತಿ, ಬೇಬಿ ಪೂಜಾರಿ, ಚೇತನ್ ಎಂಬವರಿಗೆ ಅಲ್ಪ-ಸ್ವಲ್ಪ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.