Select Your Language

Notifications

webdunia
webdunia
webdunia
webdunia

ಈಶ್ವರಪ್ಪ ಹೇಳಿಕೆಗೆ ಸಿಟಿ ರವಿ ಸಮರ್ಥನೆ?

ಈಶ್ವರಪ್ಪ ಹೇಳಿಕೆಗೆ ಸಿಟಿ ರವಿ ಸಮರ್ಥನೆ?
ಬೆಂಗಳೂರು , ಸೋಮವಾರ, 21 ಫೆಬ್ರವರಿ 2022 (12:22 IST)
ಬೆಂಗಳೂರು : ಸಚಿವ ಕೆ.ಎಸ್ ಈಶ್ವರಪ್ಪ ಸ್ಥಳೀಯ ಜನಪ್ರತಿನಿಧಿ. ಹೀಗಾಗಿ ಅವರು ಹಾಗೆ ಹೇಳಿರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೊಲೆ ಖಂಡನೀಯ. ಆದಷ್ಟೂ ಶೀಘ್ರವಾಗಿ ಕೊಲೆ ಮಾಡಿದವರನ್ನು ಬಂಧಿಸಬೇಕು. ಅವರು ಸ್ಥಳೀಯ ಜನ ಪ್ರತಿನಿಧಿ. ಹೀಗಾಗಿ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿರಬಹುದು ಎಂದು ತಿಳಿಸಿದ್ದಾರೆ. 

ನಿನ್ನೆ ರಾತ್ರಿ ಸಕ್ರಿಯವಾಗಿದ್ದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣರಾದವರ ಬಂಧನ ಆಗಬೇಕು. ಇದು ಮೇಲ್ನೋಟಕ್ಕೆ ಪೂರ್ವಯೋಜಿತ ಕೊಲೆ ಥರ ಕಾಣ್ತಿದೆ. ತನಿಖೆಗೂ ಮುನ್ನ ನಾನು ಏನೂ ಹೇಳಲ್ಲ. ಕೊಲೆಗೆ ಕಾರಣ ಗೊತ್ತಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನ್ಮೋಲ್ ಅಂಬಾನಿ