Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನ್ಮೋಲ್ ಅಂಬಾನಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನ್ಮೋಲ್ ಅಂಬಾನಿ
ಮುಂಬೈ , ಸೋಮವಾರ, 21 ಫೆಬ್ರವರಿ 2022 (12:06 IST)
ಮುಂಬೈ : ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ, ಕ್ರಿಶಾ ಶಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈನಲ್ಲಿ ಮದುವೆ ಅದ್ಧೂರಿತಯಾಗಿ ನಡೆದಿದೆ. ಜೈ ಅನ್ಮೋಲ್ ಅಂಬಾನಿ ಭಾನುವಾರ ಸಂಜೆ ಮುಂಬೈನ ಕಫೆ ಪರೇಡ್ನಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್ನಲ್ಲಿ ಕ್ರಿಶಾ ಶಾ ಅವರನ್ನು ವಿವಾಹವಾದರು. ವರ ಬಿಳಿ ಶೆರ್ವಾನಿ, ವಧು ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದರು.

ವಧು, ವರ ಸಾಕಷ್ಟು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು. ಅದ್ಧೂರಿಯಾಗಿ ಮದುವೆ ನೆರವೆರಿದೆ. ಅಂಬಾನಿ ಕುಟುಂಬ ಸ್ನೇಹಿತರು, ಗಣ್ಯರು, ಬಾಲಿವುಡ್ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

ಅಂಬಾನಿ ಕುಟುಂಬ ಸೋಮವಾರ ತಮ್ಮ ಮನೆಯಲ್ಲಿ  ಪಾರ್ಟಿಯನ್ನು ನೀಡಲಿದ್ದು, ಅಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ನವವಿವಾಹಿತರಿಗೆ ಅಭಿನಂದನೆಗಳು ಮಹಾಪೂರವೇ ಹರಿದು ಬರುತ್ತಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಎದುರೇ ತಾಯಿಯ ಬರ್ಬರ ಹತ್ಯೆ