Select Your Language

Notifications

webdunia
webdunia
webdunia
webdunia

ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಬೆಂಗಳೂರು , ಶುಕ್ರವಾರ, 26 ನವೆಂಬರ್ 2021 (19:43 IST)
ಈ ಬಾರಿ ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್‍ವೊಂದನ್ನು ನೀಡಿದೆ. ಕೊರೊನಾ ಹಿನ್ನೆಲೆ ತರಗತಿಗಳು ತಡವಾಗಿ ಪ್ರಾರಂಭ ಆಗಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪಠ್ಯವನ್ನು ಪೂರ್ಣಗೊಳಿಸಲು ಅನೇಕ ತೊಂದರೆಗಳು ಉಂಟಾಗುತ್ತಿದ್ದವು.ಹಿನ್ನೆಲೆಯಲ್ಲಿ ಈ ವರ್ಷ 20% ಪಠ್ಯ ಕಡಿತ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
 
ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಕಡಿಮೆ ಸಮಯದಲ್ಲಿ 100% ಪಠ್ಯ ಬೋಧನೆ ಮಾಡುವುದು ಕಷ್ಟವಾಗಿತ್ತು. ಹೀಗಾಗಿ ಪಠ್ಯ ಕಡಿತಕ್ಕೆ ಒತ್ತಡ ಕೇಳಿ ಬಂದಿತ್ತು. ಇದನ್ನೆಲ್ಲವನ್ನು ಗಮನಿಸಿದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 20% ಪಠ್ಯ ಕಡಿತಗೊಳಿಸುವ ಸಾಧ್ಯತೆಯಿದೆ.
 
80% ಮಾತ್ರ ಪಠ್ಯ ಬೋಧನೆಗೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಾರಂಭಿಕ ಹಂತದಲ್ಲಿ ಎಸ್‍ಎಸ್‍ಎಲ್‍ಸಿ ಪಠ್ಯ ಕಡಿತದ ಬಗ್ಗೆ ಅಷ್ಟೇ ಚಿಂತನೆ ನಡೆಸಿದ್ದು, ಬಳಿಕ ಉಳಿದ ತರಗತಿಗಳ ಪಠ್ಯ ಕಡಿತಗಳ ಬಗ್ಗೆ ಚಿಂತಿಸುವ ಸಾದ್ಯತೆಯಿದೆ ಶಿಕ್ಷಣ ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿನಾಡಿನಲ್ಲಿ ಪುಂಡರು ದಾಂಧಲೆ!