Select Your Language

Notifications

webdunia
webdunia
webdunia
webdunia

ಕೌನ್ಸಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೊಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ

ಕೌನ್ಸಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೊಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ
bangalore , ಗುರುವಾರ, 25 ನವೆಂಬರ್ 2021 (20:59 IST)
ಶಿಕ್ಷಣ
ಬೆಂಗಳೂರು:ಉತ್ತೀರ್ಣರಾದ ಉನ್ನತ ಶಿಕ್ಷಣದ ಕುರಿತು ಉಚಿತ ಮಾರ್ಗದರ್ಶನ ಹಾಗೂ ಉನ್ನತ ಮಟ್ಟದ ಕಾಲೇಜುಗಳಿಗೆ ಕೌನ್ಸಲಿಂಗ್ ನೀಡಲು ಅಮೆರಿಕ ಮೂಲದ ನೆಸ್ಟ್‌ಲಿಂಗ್ ಸಂಸ್ಥೆ ತನ್ನ ಮೊದಲ ಕೌನ್ಸಿಲಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. 
ಇದಲ್ಲದೆ ಈ ಕೇಂದ್ರದಲ್ಲಿ ಕೌನ್ಸಲಿಂಗ್ ಪಡೆದು ವಿದೇಶಕ್ಕೆ ಓದಲು ತೆರಳುವ 2.5 ಲಕ್ಷ ಡಾಲರ್‌ಗಳು ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದೆ.
 
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಈ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪದವಿ ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಮಾಹಿತಿ ಕೊರತೆ ಇರುತ್ತದೆ. ನೆಸ್ಟ್‌ಲಿಂಗ್  ಕೇಂದ್ರವು ಉನ್ನತ ಶಿಕ್ಷಣದಲ್ಲಿ ಯಾವ ಕೋರ್ಸ್‌ಗಳಿಗೆ ದಾಖಲಾಗಬಹುದು, ಎಜುಕೇಷನ್ ಲೋನ್, ಇಂಟರ್ನ್ಶಿಪ್, ವಿದ್ಯಾರ್ಥಿವೇತನ ಇತ್ಯಾದಿ ಬಗ್ಗೆ ಸಂಪೂರ್ಣ ನೆರವು ಹಾಗೂ ಮಾರ್ಗದರ್ಶನ ನೀಡಲಿದೆ. ಅದರಲ್ಲೂ ವಿದೇಶದಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ವೀಸಾ ನೆರವು ಸೇರಿದಂತೆ ಇತರೆ ಕೌನ್ಸಲಿಂಗ್‌ನನ್ನು ಈ ಕೇಂದ್ರ ನೀಡುತ್ತಿರುವುದು ಶ್ಲಾಘನೀಯ ಎಂದರು.‌
 
ವಿದ್ಯಾರ್ಥಿಗಳಿಗೆ ನೀಡುವ ಸಂಪೂರ್ಣ ಕೌನ್ಸಲಿಂಗ್ ಹಾಗೂ ಮಾಹಿತಿಯನ್ನು ಉಚಿತವಾಗಿ ನೀಡುತ್ತಿರುವುದು ಗಮನಾರ್ಹ. ಮೊದಲು ಅರ್ಜಿ ಸಲ್ಲಿಸುವ ಆಯ್ದ ವಿದ್ಯಾರ್ಥಿಗಳಿಗೆ ಒಟ್ಟು 250,000 ಡಾಲರ್ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ. ಜೊತೆಗೆ ಮೊದಲು ನೋಂದಾಯಿತ 100 ವಿದ್ಯಾರ್ಥಿಗಳಿಗೆ ಇಂಟರ್‌ನ್ಯಾಷನಲ್ ಇಂಗ್ಲಿಷ್ ಲಾಂಗ್‌ವೇಜ್ ಟೆಸ್ಟಿಂಗ್ ಸಿಸ್ಟಮ್ ಹಾಗೂ ಗ್ರಾಜುವೇಟ್‌ ರೆಕಾರ್ಡ್‌ ಎಗ್ಸಾಮಿನೇಷನ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
 
ಈ ಕುರಿತು ಮಾತನಾಡಿದ ನೆಸ್ಟ್‌ಲಿಂಗ್  ಸಂಸ್ಥೆ ಸಂಸ್ಥಾಪಕರಾದ ರಾಜಶೇಖರ್ ಬಸವರಾಜು, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಉಚಿತವಾಗಿ ಸೇವೆ ನೀಡಲು ಬದ್ಧವಾಗಿದೆ, ಈಗಾಗಲೇ ಅಮೆರಿಕಾದಲ್ಲಿ ಈ ರೀತಿಯ ಕೇಂದ್ರ ತೆರೆದಿದ್ದು, 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನೀಡಿ 300ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ನೀಡಲಾಗಿದೆ. ಜೊತೆಗೆ ಅಲ್ಲಿಯೂ ವಿದ್ಯಾರ್ಥಿಗೆಳಿಗೆ ಸ್ಕಾಲರ್‌ಶಿಪ್‌ ನೀಡಲಾಗಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ವಿದ್ಯಾರ್ಥಿ ಲೋನ್ ಕೊಡಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದರು.
 
ವಿಟಿಯು ಉಪಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ, ನೆಸ್ಟ್‌ಲಿಂಗ್  ಕೇಂದ್ರದ ಉದ್ದೇಶ ಹೆಚ್ಚು ಪ್ರಶಂಸನೀಯ. ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌನ್ಸಲಿಂಗ್ ನೀಡಿ, ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಕೊಡಿಸುತ್ತಿರುವ ಇವರ ಸೇವೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು. 
 
ಕಾರ್ಯಕ್ರದಲ್ಲಿ ನೆಸ್ಟ್‌ಲಿಂಗ್ ಸಿಐಒ ಸೌಮ್ಯ ಪರ್ಯಾಯರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ನೊಂದಣಿ ಅಭಿಯಾನ ಸದುಪಯೋಗ ಪಡಿಸಿಕೊಳ್ಳಿ