ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಿನ 6 ತಿಂಗಳಲ್ಲಿ 643 ವಿದ್ಯುತ್ ಚಾಲಿತ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ.
ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರು, ಭಾರತ್ ಸ್ಟೇಜ್ 6ರ ಡೀಸೆಲ್ ವಾಹನಗಳು ತಾಂತ್ರಿಕ ಅಗತ್ಯತೆಗಳನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ 565 ಬಸ್ ಗಳನ್ನು ಬಿಎಂಟಿಸಿ ಪಡೆಯಲಿದೆ ಎಂದರು.
ಸದ್ಯ ಮೂರನೇ ಹಂತದ ಪರಿಶೀಲನೆ ನಡೆಯುತ್ತಿದ್ದು, ಇದರ ಅನುಮೋದನೆ ಬಳಿಕ ಮೂರು ತಿಂಗಳಲ್ಲಿ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ. ಜತೆಗೆ ಜೆಬಿಎಂ ನಿಂದ 90 ಎಲೆಕ್ಟ್ರಿಕ್ ಬಸ್ ಗಳು ಹಾಗೂ ಅಶೋಕ್ ಲೇಲ್ಯಾಂಡ್ ನಿಂದ 300 ಬಸ್ ಗಳನ್ನು ಮುಂದಿನ 6 ತಿಂಗಳಲ್ಲಿ ಪಡೆಯಲಿದ್ದೇವೆ ಎಂದರು.
ಈ ಪೈಕಿ ಬಹುತೇಕ ಬಸ್ ಗಳನ್ನು ನಮ್ಮ ಮೆಟ್ರೋ ಸಂಪರ್ಕ ಹೊಂದಲು ಬಳಸಲಾಗುತ್ತದೆ ಎಂದರು.
ಬಿಎಂಟಿಸಿ ತನ್ನ ಹಳೆಯ ಬಸ್ ಗಳನ್ನು ಹರಾಜಿಗೆ ಹಾಕಿ ಹೊಸ ಬಸ್ ಗಳನ್ನು ಖರೀದಿ ಮಾಡುತ್ತಿದೆ. ಈಗ ನಗರದಲ್ಲಿ 5,141 ಬಸ್ ಗಳು ಪ್ರತಿದಿನ ಸಂಚರಿಸುತ್ತಿವೆ.