Select Your Language

Notifications

webdunia
webdunia
webdunia
webdunia

ಮೆಟ್ರೋ ಸುರಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಟಿಬಿಎಂ ವರದಾ ಹಾಗು ರುದ್ರ

ಮೆಟ್ರೋ ಸುರಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಟಿಬಿಎಂ ವರದಾ ಹಾಗು ರುದ್ರ
bangalore , ಗುರುವಾರ, 11 ನವೆಂಬರ್ 2021 (21:01 IST)
ಬೆಂಗಳೂರು: ನಗರದ ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದಿಂದ ಲ್ಯಾಂಗ್‌ಫೋರ್ಡ್ ನಿಲ್ದಾಣದವರೆಗೆ ಮತ್ತು ದಕ್ಷಿಣ ಬೆಂಗಳೂರಿನಿಂದ ಡೈರಿ ವೃತ್ತ ನಿಲ್ದಾಣದವರೆಗೆ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.
 
ಈ ವರ್ಷದ ಮಾರ್ಚ್ 12 ರಂದು ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದಲ್ಲಿ ಸುರಂಗ ಕೊರೆಯಲು ಪ್ರಾರಂಭಿಸಿದ ಟಿಬಿಎಂ (ಟನಲ್ ಬೋರಿಂಗ್ ಯಂತ್ರ) ವರದಾ 594 ಮೀಟರ್‌ಗಳ ಸುರಂಗವನ್ನು ಪೂರ್ಣಗೊಳಿಸಿ ಲ್ಯಾಂಗ್‌ಫೋರ್ಡ್ ನಿಲ್ದಾಣದಲ್ಲಿ ಇಂದು (ಗುರುವಾರ) ಹೊರಬಂದಿದೆ ಎಂದಿದೆ. 
 
ಈ ಮಾದರಿಯಲ್ಲಿ ದಕ್ಷಿಣ ಬೆಂಗಳೂರಿನ ರಾಂಪ್‌ನಿಂದ ರುದ್ರ ಹೆಸರಿನ ಟಿಬಿಎಂ ಸುರಂಗ ಕೊರೆಯುವುದನ್ನು ಆರಂಭಿಸಿ 614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿ ಇಂದು ಡೈರಿ ನಿಲ್ದಾಣವನ್ನು ತಲುಪಿದೆ ಎಂದು ಹೇಳಿದೆ.  
 
ಆದರೆ ಟಿಬಿಎಂ ಯಂತ್ರವು ಡೈರಿ ವೃತ್ತ ನಿಲ್ದಾಣದಲ್ಲಿ ಕೊರೆಯ ಮುಂದುವರಿದಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿದೆ.







Share this Story:

Follow Webdunia kannada

ಮುಂದಿನ ಸುದ್ದಿ

ವಾಹನಗಳ ಬೀಗ ಮುರಿದು ಕಳ್ಳತನ