Publish Date: Mon, 30 Dec 2019 (18:53 IST)
Updated Date: Mon, 30 Dec 2019 (19:02 IST)
ರಾಜ್ಯದಲ್ಲಿ ನಡೆದ ಗೋಲಿಬಾರ್ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಶುರುವಾಗಿದೆ.
ಮಂಗಳೂರು ಹಿಂಸಾಚಾರದ ಬಗ್ಗೆ ಸರಕಾರವು ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವುದರಿಂದ ಈಗ ತನಿಖೆ ಆರಂಭವಾಗಿದೆ.
ಮಂಗಳೂರು ಹಿಂಸಾಚಾರದ ತನಿಖೆಯನ್ನು ರಾಜ್ಯ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಿದ್ದು, ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು. ಅದರಂತೆ ಮಂಗಳೂರಿಗೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ತನಿಖೆ ಆರಂಭಿಸಿದ್ರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿಯಿಂದ ಸ್ಟೇಟ್ ಬ್ಯಾಂಕ್ ಪರಿಸರ ಬಳಿ, ನೆಲ್ಲಿಕಾಯಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.