Publish Date: Mon, 30 Dec 2019 (18:49 IST)
Updated Date: Mon, 30 Dec 2019 (18:52 IST)
ಬಾಲಿವುಡ್ ನಟಿ ರವಿನಾ ಟಂಡನ್ ಹಾಗೂ ನಿರ್ಮಾಪಕಿ ಪರ್ಹಾ ಖಾನ್ ವಿರುದ್ಧ ಕ್ರೈಸ್ತರ ಆಕ್ರೋಶ ಮುಂದುವರಿದಿದೆ.
ಕ್ರೈಸ್ತ ಧರ್ಮದ ಬೈಬಲ್‍ನ ಹಲ್ಲೆಯುಯಾ ಶಬ್ದ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್ ನಿರ್ಮಾಪಕಿ ಪರ್ಹಾ ಖಾನ್ ಹಾಗೂ ನಟಿ ರವಿನಾ ಟಂಡನ್ ವಿರುದ್ಧ ಕ್ರೈಸ್ತ ಸಮುದಾಯದವರು ಹುಬ್ಬಳ್ಳಿ ನಗರದ ತಹಸೀಲ್ದಾರ ಕಛೇರಿ ಎದುರುಗಡೆ ಪ್ರತಿಭಟನೆ ಮಾಡಿದರು.
ಬಾಲಿವುಡ್ ಸಿನಿಮಾ ಒಂದರಲ್ಲಿ ಬೈಬಲ್ ನಲ್ಲಿ ಬರುವ 'ಹಲೆಲುಯಾ' ಪದಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆ ದೃಶ್ಯದ ತುಣುಕುಗಳನ್ನು ಅಳಿಸಿ ಹಾಕಬೇಕು ಹಾಗೂ ಶಾಂತಿಪ್ರಿಯ ಕ್ರೈಸ್ತ ಸಮುದಾಯಕ್ಕೆ ಕ್ಷಮೆ ಕೇಳಬೇಕು. ಅವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಕೂಡಲೇ ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ರು.