Publish Date: Wed, 19 Feb 2020 (20:29 IST)
Updated Date: Wed, 19 Feb 2020 (20:30 IST)
ವಿಧಾನಸಭೆಯಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಕೇಸ್ ಭಾರೀ ಗದ್ದಲಕ್ಕೆ ಕಾರಣವಾಗ್ತಿದೆ.
ವಿಪಕ್ಷಗಳ ಸದಸ್ಯರು ಹಾಗೂ ಮುಖಂಡರು ಇದೇ ವಿಷಯವಾಗಿ ಆಡಳಿತ ಪಕ್ಷದ ಸದಸ್ಯರ ಜೊತೆಗೆ ತೀವ್ರ ವಾಗ್ದಾಳಿ, ಮಾತಿನ ಚಕಮಕಿ ನಡೆಸಿದ್ದಾರೆ.
ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಯಾರೂ ಕಸಿದುಕೊಳ್ಳೋಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಮತ, ಭಿನ್ನಾಭಿಪ್ರಾಯ ಇರಬೇಕಾಗುತ್ತದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಲ್ಲಿ ಆತುರವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಶಾಂತಿಯುತವಾಗಿ ನಡೆದ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದಿದ್ದು ಸರಿಯಲ್ಲ. ಪೊಲೀಸರು ಲಾಠಿ ಚಾರ್ಜ್, ಗೋಲಿಬಾರ್ ನಡೆಸಿರೋ ಕ್ರಮ ಸರಿಯಲ್ಲ ಅಂತ ಸಿದ್ದರಾಮಯ್ಯ ಗುಡುಗಿದ್ರು.