Publish Date: Fri, 31 Jan 2020 (17:24 IST)
Updated Date: Fri, 31 Jan 2020 (17:25 IST)
ವಿಧಾನ ಸಭೆ ಸ್ಪೀಕರ್ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಜಂಟಿ ಅಧಿವೇಶನ ನಡೆಯೋವಾಗ ರಾಜ್ಯಪಾಲರ ಭಾಷಣದ ವೇಳೆ ಯಾರೇ ಅಡ್ಡಿಪಡಿಸಿದರೂ ಅಥವಾ ಕ್ರಿಯಾಲೋಪ ಎತ್ತಿದರೆ ಅವರನ್ನು ಸಸ್ಪೆಂಡ್ ಮಾಡೋದಾಗಿ ಅಧಿಸೂಚನೆ ಹೊರಡಿಸಿರೋ ಕ್ರಮಕ್ಕೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಸರಕಾರದ ತೀರ್ಮಾನದ ಬಗ್ಗೆ ಧ್ವನಿ ಎತ್ತೋ ಅವಕಾಶ ಪ್ರಜಾಪ್ರಭುತ್ವದಲ್ಲಿದೆ.
ಸ್ಪೀಕರ್ ದ್ವೇಷದ ರಾಜಕೀಯ ಮಾಡ್ತಿದ್ದಾರೆ ಅಂತ ಡಿಕೆಶಿ ಹರಿಹಾಯ್ದಿದ್ದಾರೆ.