Select Your Language

Notifications

webdunia
webdunia
webdunia
webdunia

ಡಿಕೆಶಿಗೆ ನೀಡಿದ್ದ ಸವಲತ್ತು ನನಗೂ ನೀಡಿ- ರಮೇಶ್ ಜಾರಕಿಹೊಳಿ ಬೇಡಿಕೆ

ಡಿಕೆಶಿಗೆ ನೀಡಿದ್ದ ಸವಲತ್ತು ನನಗೂ ನೀಡಿ- ರಮೇಶ್ ಜಾರಕಿಹೊಳಿ ಬೇಡಿಕೆ
ಬೆಂಗಳೂರು , ಬುಧವಾರ, 5 ಫೆಬ್ರವರಿ 2020 (10:38 IST)
ಬೆಂಗಳೂರು : ನಾಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ್ ಜಾರಕಿಹೊಳಿ ಕಳೆದ ಸರ್ಕಾರದಲ್ಲಿ ಡಿಕೆಶಿಗೆ ನೀಡಿದ್ದ ಸವಲತ್ತಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.


ನೀರಾವರಿ ಖಾತೆ, ವಿಧಾನಸೌಧದಲ್ಲಿ ಡಿಕೆಶಿ ಬಳಸಿದ್ದ ಕೊಠಡಿ, ಸರ್ಕಾರಿ ಬಂಗಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.


ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಎಲ್ಲಾ ಸವಲತ್ತೂಗಳನ್ನು ನೀಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ನೀರಾವರಿ ಖಾತೆಯಲ್ಲಿ ಅಂತರ್ ರಾಜ್ಯ ಸಮಸ್ಯೆಗಳು ಎದುರಾದಾಗ ಅದನ್ನು ಸೂಕ್ತವಾಗಿ ನಿರ್ವಹಿಸಬೇಕು. ಒಂದು ವೇಳೆ ಇದರಲ್ಲಿ ವಿಫಲರಾದರೆ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೇಟಾಗಿ ಎದ್ದಿದ್ದಕ್ಕೆ ತಮಾಷೆ ಮಾಡಿದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಭೂಪ