ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ ಭಟ್ ಉಲ್ಟಾ ಹೊಡೆಯುತ್ತಿದ್ದಂತೇ ಆಕೆಗೆ ಬೆಂಬಲ ನೀಡಿದ್ದ ಸೌಜನ್ಯ ಪರ ಹೋರಾಟಗಾರರಲ್ಲಿ ಒಬ್ಬರಾದ ಗಿರೀಶ್ ಮಟ್ಟೆಣ್ಣನವರ್ ವರಸೆಯೇ ಬದಲಾಗಿದೆ.
ಸುಜಾತ ಭಟ್ ಎಂಬ ಮಹಿಳೆ ಎಂಬಿಬಿಎಸ್ ಓದುತ್ತಿದ್ದ ನನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದಾಗ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದಾಳೆ ಎಂದು ಆರೋಪಿಸಿದ್ದರು. ಸೌಜನ್ಯ ಪರ ಹೋರಾಟಗಾರರಿಗೆ ಧರ್ಮಸ್ಥಳದ ಬಗ್ಗೆ ವಿರುದ್ಧ ಆರೋಪಕ್ಕೆ ಈ ಪ್ರಕರಣವೂ ದೊಡ್ಡ ಬೂಸ್ಟ್ ಸಿಕ್ಕಂತಾಗಿತ್ತು.
ಈ ಹಿನ್ನಲೆಯಲ್ಲಿ ಸುಜಾತ ಭಟ್ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ ಸುಜಾತ ಭಟ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅನನ್ಯ ಭಟ್ ನನ್ನ ಮಗಳಲ್ಲ, ಸುಳ್ಳು ಹೇಳಿದ್ದೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇದರ ಬೆನ್ನಲ್ಲೇ ಗಿರೀಶ್ ಮಟ್ಟೆಣ್ಣನವರ್ ಪ್ರತಿಕ್ರಿಯಿಸಿದ್ದು ಸುಜಾತ ಭಟ್ ನಮ್ಮ ಬಳಿ ಅವರ ಕತೆ ಹೇಳಿದಾಗ ಅನುಕಂಪದಿಂದ ನಾವು ಬೆಂಬಲ ನೀಡಿದ್ದೆವು. ಆದರೆ ಆಕೆ ನಮಗೂ ಮಗಳ ಫೋಟೋ, ಇನ್ನಿತರ ದಾಖಲೆ ನೀಡಿರಲಿಲ್ಲ ಎಂದಿದ್ದಾರೆ.