ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಹೆಚ್ಚು ಸದ್ದು ಮಾಡಿದ್ದು ಅನನ್ಯಾ ಭಟ್ ಕೇಸ್. ಇದೀಗ ದೂರುದಾರೆ ಸುಜಾತ ಭಟ್ ಒಂದು ಸಂದರ್ಶನದಲ್ಲಿ ನಾನು ಸುಳ್ಳು ಎಂದ ಸುಜಾತ ಭಟ್ ಬಳಿಕ ಮಾಧ್ಯಮಗಳ ಮುಂದೆ ಹೌದೌದು ಮಗಳು ನಾನು ಹೇಳಿದ್ದು ಸತ್ಯ ಎಂದು ಉಲ್ಟಾ ಹೊಡೆದಿದ್ದಾರೆ.
ಧರ್ಮಸ್ಥಳದಲ್ಲಿ ಎಸ್ಐಟಿ ಮುಂದೆ ನನ್ನ ಮಗಳು ಅನನ್ಯಾ ಭಟ್ ಎಂಬಿಬಿಎಸ್ ಓದುತ್ತಿದ್ದವಳು. ಧರ್ಮಸ್ಥಳಕ್ಕೆಂದು ಸ್ನೇಹಿತರ ಜೊತೆ ಬಂದವಳು ಕೊಲೆಯಾಗಿದ್ದಾಳೆ. ಅವಳ ಅಸ್ಥಿಪಂಜರನ್ನಾದರೂ ಪತ್ತೆ ಮಾಡಿ ಕೊಡಿ. ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದೆಲ್ಲಾ ಕಣ್ಣೀರು ಹಾಕಿದ್ದರು. ಬಳಿಕ ಎಸ್ಐಟಿಗೂ ಈ ಸಂಬಂಧ ದೂರು ನೀಡಿದ್ದರು.
ಆದರೆ ಈಗ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಸುಜಾತ ಭಟ್ ನಾನು ಮಗಳ ಬಗ್ಗೆ ಹೇಳಿದ್ದು ಸುಳ್ಳು. ಅನನ್ಯ ಭಟ್ ಎಂಬ ಮಗಳೇ ಇಲ್ಲ. ನನ್ನ ತಾತನ ಆಸ್ತಿಯಲ್ಲಿ ಪಾಲು ಪಡೆಯಲು ಈ ರೀತಿ ಹೇಳಿದ್ದೆ. ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ದರು. ಅವರ ಹೇಳಿಕೆ ಸಂಚಲನ ಸೃಷ್ಟಿಸಿತ್ತು.
ಇದರ ಬೆನ್ನಲ್ಲೇ ಸುಜಾತ ಭಟ್ ಮಾಧ್ಯಮಗಳಿಗೆ ಉಲ್ಟಾ ಹೇಳಿಕೆ ನೀಡಿದ್ದಾರೆ. ನನ್ನನ್ನು ಕಾರಿನಲ್ಲಿ ಕೂರಿಸಿ ಬೆದರಿಸಿ ಈ ರೀತಿ ಧರ್ಮಸ್ಥಳದ ಪರವಾಗಿ ಹೇಳಿಕೆ ನೀಡಿಸಿದ್ದಾರೆ. ಅನನ್ಯಾ ಭಟ್ ನನ್ನ ಮಗಳು ಎಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಸುಜಾತ ಭಟ್ ಹೇಳಿಕೆಗಳೇ ಈಗ ಗೊಂದಲದ ಗೂಡಾಗಿದೆ.