Select Your Language

Notifications

webdunia
webdunia
webdunia
webdunia

ಮಹೇಶ್ ಶೆಟ್ಟಿ ತಿಮರೋಡಿನ ಒದ್ದು ಒಳಗೆ ಹಾಕ್ಸಿದ್ದೀವಿ: ಡಿಕೆ ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2025 (12:58 IST)
ಬೆಂಗಳೂರು: ಧರ್ಮಸ್ಥಳ ಕೇಸ್ ನಲ್ಲಿ ಭಾರೀ ಸದ್ದು ಮಾಡ್ತಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ ಎಂದಿದ್ದಾರೆ.

ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನದ ಬಗ್ಗೆ ಇಂದು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಬಳಿ ಪ್ರತಿಕ್ರಿಯೆ ಕೇಳಿವೆ. ಈ ವೇಳೆ ಮಾತನಾಡಿದ ಡಿಕೆಶಿ, ನೋಡ್ರಪ್ಪಾ ಅದೊಂದು ಠುಸ್ ಗಿರಾಕಿ. ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ. ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಪೊಲೀಸರ ತಂಡ ಸರಿಯಾಗಿ ತನಿಖೆ ಮಾಡ್ತಿದ್ದೆ.

ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಗ್ಗೆ ಏನೋ ಮಾತನಾಡಿದ್ದಾನೆ. ಅದಕ್ಕೆ ಒದ್ದು ಒಳಗೆ ಹಾಕ್ಸಿದ್ದೀವಿ. ಅವನತ್ರ ಏನು ದಾಖಲೆ ಇದೆ ಹಾಗೆಲ್ಲಾ ಆರೋಪ ಮಾಡಕ್ಕೆ?

ರಾಜಕೀಯವಾಗಿ ಏನೇ ವಿರೋಧ ಇರಬಹುದು. ಆದರೆ ನಮ್ಮ ವಿರೋಧ ಪಕ್ಷದ ನಾಯಕರ ಬಗ್ಗೆ ಆಧಾರವಿಲ್ಲದೇ ಆರೋಪ ಮಾಡಿದ್ದಕ್ಕೆ ತಕ್ಕ ಕ್ರಮ ಕೈಗೊಂಡಿದ್ದೀವಿ. ಸಿಎಂ ಬಗ್ಗೆನೂ ಹೇಳಿಕೆ ನೀಡಿದ್ರು. ಅದೂ ಸರಿಯಲ್ಲ. ಏನೇ ವಿರೋಧಗಳಿರಲಿ, ಅದಕ್ಕೆ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲದೇ ಏನೇನೋ ಮಾತನಾಡೋದಲ್ಲ’ ಎಂದು ಡಿಕೆಶಿ ಖಡಕ್ ಆಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿಗಳ ಎತ್ತಂಗಡಿ ವಿಚಾರದಲ್ಲಿ ಮಹತ್ವದ ತೀರ್ಪು ಕೊಟ್ಟ ಸುಪ್ರೀಂಕೋರ್ಟ್