ಬೆಂಗಳೂರು: ಸದನದಲ್ಲೇ ಬಿಜೆಪಿ ನಾಯಕರಿಗೆ ಟಾಂಗ್ ಕೊಡಲು ಡಿಸಿಎಂ ಡಿಕೆ ಶಿವಕುಮಾರ್ ಆರ್ ಎಸ್ಎಸ್ ನ ಧ್ಯೇಯ ಗೀತೆಯಾದ ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ್ದಾರೆ. ಆದರೆ ಇದಕ್ಕೆ ಸಿಕ್ಕ ರಿಯಾಕ್ಷನ್ ಮಾತ್ರ ಸಖತ್ ಕ್ರೇಝಿಯಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಈಗ ಸಿಎಂ ಆಗಲು ಒಳಗೊಳಗೇ ಪ್ರಯತ್ನ ಪಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ ಬಿಡಿ. ಇದರ ನಡುವೆ ಸದನದಲ್ಲೇ ನಮಸ್ತೇ ಹಾಡು ಹಾಡಿರುವುದು ಎಲ್ಲರೂ ಕಾಲೆಳೆಯಲು ಒಂದು ಅಸ್ತ್ರ ಸಿಕ್ಕಂತಾಯಿತು.
ಆರ್ ಸಿಬಿ ಕಾಲ್ತುಳಿದ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿತ್ತು. ಡಿಕೆ ಶಿವಕುಮಾರ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಹೋದ ವಿಚಾರವನ್ನು ಆರ್ ಅಶೋಕ್ ಕೆದಕಿದರು. ಆರ್ ಎಸ್ಎಸ್ ಚಡ್ಡಿ ಹಾಕಿದ್ರಲ್ಲ ಎಂದು ಟಾಂಗ್ ಕೊಟ್ಟರು. ಪ್ರತಿಯಾಗಿ ಡಿಕೆ ಶಿವಕುಮಾರ್ ಆರ್ ಎಸ್ಎಸ್ ಗೀತೆ ಹಾಡಿದರು. ಇದಕ್ಕೆ ಸದಸ್ಯರಿಂದ ಚೆನ್ನಾಗಿದೆ ಎಂದು ಅಭಿಪ್ರಾಯವೂ ವ್ಯಕ್ತವಾಯಿತು.
ಆದರೆ ಡಿಕೆಶಿ ಆರ್ ಎಸ್ಎಸ್ ಹಾಡು ಹಾಡಿದ್ದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಸದ್ಯದಲ್ಲೇ ಬಿಜೆಪಿಗೆ ಬರುವ ಸೂಚನೆ ಇದ್ದಂಗಿದೆ. ಕಾಂಗ್ರೆಸ್ ನಲ್ಲಂತೂ ನೀವು ಸಿಎಂ ಆಗಲ್ಲ ಬಿಜೆಪಿಗೆ ಬನ್ನಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಆರ್ ಎಸ್ಎಸ್ ಹಾಡು ಹೇಳಿ ಹೈಕಮಾಂಡ್ ಗೆ ಒಳ್ಳೆ ಮೆಸೇಜ್ ಕಳಿಸಿದ್ರಿ ಎಂದು ಕಾಲೆಳೆದಿದ್ದಾರೆ.