Select Your Language

Notifications

webdunia
webdunia
webdunia
webdunia

ರಾಜ್ಯದ ಶಾಸಕರಿಗೆ ವೇತನ, ಭತ್ಯೆ ಎಲ್ಲವೂ ಡಬಲ್: ಜನರಿಗೆ ಮಾತ್ರ ಬೆಲೆ ಏರಿಕೆ ಬರೆ

Vidhana Soudha

Krishnaveni K

ಬೆಂಗಳೂರು , ಗುರುವಾರ, 20 ಮಾರ್ಚ್ 2025 (14:41 IST)
ಬೆಂಗಳೂರು: ರಾಜ್ಯದ ಎಲ್ಲಾ ಶಾಸಕರಿಗೆ ವೇತನ ಮತ್ತು ದಿನ ಭತ್ಯೆ ಹೆಚ್ಚಳವಾಗಿದೆ. ಆದರೆ ಜನ ಸಾಮಾನ್ಯರಿಗೆ ಮಾತ್ರ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಬರೆ ಎಳೆಯಲಾಗುತ್ತಿದೆ.

ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025 ಕಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಸದನದಲ್ಲಿ ವಿಧೇಯಕ ಮಂಡನೆಯಾಗಲಿದೆ.

ಪ್ರಸ್ತುತ ಶಾಸಕರಿಗೆ 40,000 ರೂ. ವೇತನವಿದ್ದು ಇನ್ನೀಗ ಇದು ಡಬಲ್ ಆಗಲಿದೆ. ಅಂದರೆ ಶಾಸಕರ ವೇತನ 80,000 ರೂ.ಗಳಾಗಲಿದೆ. ಪಿಂಚಣಿ ಇದುವರೆಗೆ 50,000 ರೂ.ಗಳಿತ್ತು. ಇನ್ನೀಗ 75,000 ರೂ.ಗಳಾಗಲಿವೆ. ಮತ್ತೆ ಆರಿಸಿ ಬಂದರೆ ಇದುವರೆಗೆ 5,000 ಹೆಚ್ಚುವರಿ ವೇತನವಿತ್ತು. ಆದರೆ ಇನ್ನೀಗ 20,000 ರೂ. ಹೆಚ್ಚುವರಿ ಸಂಬಳ ಸಿಗಲಿದೆ. ನಿವೃತ್ತ ಶಾಸಕರ ವೈದ್ಯಕೀಯ ಭತ್ಯೆ ಇದುವರೆಗೆ 5000 ರೂ.ಗಳಿದ್ದರೆ ಇನ್ನೀಗ 20,000 ರೂ.ಗಳಾಗಲಿದೆ.

ಕ್ಷೇತ್ರ ಪ್ರಯಾಣ ಭತ್ಯೆ ರೂಪದಲ್ಲಿ ಇದುವರೆಗೆ 60,000 ರೂ. ಸಿಗುತ್ತಿತ್ತು. ಇನ್ನು ಇದು 80 ಸಾವಿರ ರೂ.ಗೆ ಏರಿಕೆಯಾಗಲಿದೆ. ರೈಲು, ವಿಮಾನ ಪ್ರಯಾಣ ಭತ್ಯೆ ವಾರ್ಷಿಕವಾಗಿ ಇದುವರೆಗೆ 60,000 ರೂ.ಗಳಿತ್ತು ಇನ್ನೀಗ 80,000 ರೂ. ಸಿಗಲಿದೆ. ದೂರವಾಣಿ, ಕ್ಷೇತ್ರ ಭತ್ಯೆ, ಪೋಸ್ಟ್ ವೆಚ್ಚ 85,000 ರೂ. ಸಿಗುತ್ತಿತ್ತು. ಇನ್ನು 1,10,000 ರೂ. ಸಿಗುವುದು. ಆಪ್ತ ಸಹಾಯಕರ ವೇತನ ಭತ್ಯೆ ರೂಪದಲ್ಲಿ ಇದುವರೆಗೆ 20,000 ರೂ. ನೀಡಲಾಗುತ್ತಿತ್ತು. ಇನ್ನೀಗ 25 ಸಾವಿರ ರೂ. ಸಿಗಲಿದೆ.

ಶಾಸಕರ ಭತ್ಯೆ, ವೇತನ ಹೆಚ್ಚಳ ವಿಚಾರ ಹೊರಬರುತ್ತಿದ್ದಂತೇ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಶಾಸಕರಿಗೆ ಮಾತ್ರ ವೇತನ ಡಬಲ್, ಭತ್ಯೆಯೂ ಡಬಲ್. ಜನ ಸಾಮಾನ್ಯರಿಗೆ ಬೆಲೆ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುವುದೇ ಆಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿನಲ್ಲಿ ಮೀನು ಕದ್ದ ಮಹಿಳೆಗೆ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ವಿಡಿಯೋ: ಸಿಎಂ ರಿಯಾಕ್ಷನ್ ನೋಡಿ