Select Your Language

Notifications

webdunia
webdunia
webdunia
webdunia

ನಾಪತ್ತೆಯಾದ ಅನನ್ಯಾಳದೆಂದು ಸುಜಾತ ಭಟ್‌ ತೋರಿಸಿದ್ದ ಫೋಟೊಗೆ ಮತ್ತೊಂದು ಬಿಗ್‌ಟ್ವಿಸ್ಟ್‌

Ananya Bhatt missing case, Sujata Bhatt, Dharmasthala Burude case

Sampriya

ಬೆಂಗಳೂರು , ಬುಧವಾರ, 20 ಆಗಸ್ಟ್ 2025 (14:44 IST)
Photo Credit X
ಬೆಂಗಳೂರು: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಅನನ್ಯಾ ಭಟ್‌ ಪ್ರಕರಣಕ್ಕೆ ಸಂಬಂಧಿದಂತೆ ಸುಜಾತ ಭಟ್‌ ತೋರಿಸಿದ್ದ ಫೋಟೊಗೆ ಬಿಗ್‌ ಟ್ವಿಸ್ಟ್‌ ದೊರಕಿದೆ. ಚಿತ್ರದಲ್ಲಿರುವುದು ಕೊಡಗಿನ ವಾಸಂತಿ ಎಂದು ಆಕೆಯ ಸಹೋದರ ಖಚಿತಪಡಿಸಿದ್ದಾರೆ. 

ನನ್ನ ತಂಗಿ ವಾಸಂತಿಯ ಭಾವಚಿತ್ರವನ್ನು ಇಟ್ಟುಕೊಂಡು ಸುಜಾತ ಭಟ್‌ ತನ್ನ ಮಗಳು ಅನನ್ಯಾ ಭಟ್‌ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆಕೆಯ ಸಹೋದರ ವಿಜಯ್‌ ಅವರು ಹೇಳಿದ್ದಾರೆ. 

ಅನನ್ಯಾ ಭಟ್‌ ಅವರು ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಸಂತಿ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಮ್ಮ ಕುಟುಂಬ ಆಘಾತಗೊಂಡಿದೆ ಎಂದು ತಿಳಿಸಿದ್ದಾರೆ. 

2007 ರಲ್ಲಿ ವಾಸಂತಿ ಮತ್ತು ಶ್ರೀವತ್ಸ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಾಸಂತಿ ವಿರಾಜಪೇಟೆಗೆ ಬಂದಿದ್ದರು. ನಂತರ ಅವರು ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಅವರ ಚಹರೆಗಳನ್ನು ತೋರಿಸಿದಾಗ ನನ್ನ ಸಹೋದರಿ ಎನ್ನುವುದು ದೃಢಪಟ್ಟಿತ್ತು ಎಂದು ವಿಜಯ್‌ ಮಾಹಿತಿ ನೀಡಿದರು.

ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ದಾಖಲೆಯನ್ನು ಸುಜಾತ ಭಟ್‌ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್‌ ಫೋಟೋ ಬಿಡುಗಡೆ ಮಾಡಿದ್ದರು. ಇದೀಗ ಅದೇ ಫೋಟೊ ಬಗ್ಗೆ ಚರ್ಚೆ ಆರಂಭವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ: ರಾಧಾಕೃಷ್ಣನ್‌ಗೆ ಪ್ರಧಾನಿ ಮೋದಿ ಸೇರಿ ಎನ್‌ಡಿಎ ನಾಯಕರು ಸಾಥ್‌