ಬೆಂಗಳೂರು: ಇತ್ತೀಚೆಗೆ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಯೋಜನೆ ಪ್ರಸ್ತಾಪಿಸಿ ಟೀಕೆಗೊಳಗಾಗಿದ್ದ ಬಿಬಿಎಂಪಿ ಈಗ ಬೀದಿನಾಯಿಗಳಿಗೆ ಟ್ರೈನಿಂಗ್ ಕೊಡಲು ಮುಂದಾಗಿದೆ.
ಬೀದಿನಾಯಿಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ತರುತ್ತಿರುವ ಯೋಜನೆಗಳು ಟೀಕೆಗೆ ಗುರಿಯಾಗಿದೆ. ಮನುಷ್ಯರ ಮೇಲೆ ದಾಳಿ ಮಾಡುವ ಬೀದಿನಾಯಿಗಳಿಗೆ ಟ್ರೈನಿಂಗ್ ಕೊಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಇದು ಮತ್ತೊಮ್ಮೆ ಜನರ ಟೀಕೆಗೆ ಗುರಿಯಾಗಿದೆ.
ಎಲ್ಲೆಲ್ಲಿ ಬೀದಿ ನಾಯಿಗಳು ಜನರ ಮೇಲೆ ಅಟ್ಯಾಕ್ ಮಾಡುತ್ತವೆಯೋ ಅಲ್ಲೆಲ್ಲಾ ಟ್ರೈನರ್ ಗಳನ್ನು ನಿಯೋಜಿಸಲು ಮುಂದಾಗಿದೆ. ಪೊಲೀಸ್ ನಾಯಿಗಳಿಗೆ ಟ್ರೈನಿಂಗ್ ನೀಡುವ ತರಬೇತಿದಾರರನ್ನು ನಿಯೋಜಿಸಲು ಚಿಂತನೆನ ನಡೆಸಿದೆ.
ಪ್ರತಿಯೊಬ್ಬ ಟ್ರೈನರ್ ಗೆ ದಿನಕ್ಕೆ 233 ರೂ. ನಿಗದಿಪಡಿಸಲಾಗುತ್ತದೆ. ಬೀದಿನಾಯಿಗಳಿಂದ ಪದೇ ಪದೇ ಸಮಸ್ಯೆಗಳಾಗುತ್ತಿವೆ. ಇದಕ್ಕೆ ಸಂತಾನ ಹರಣ ಚಿಕಿತ್ಸೆ, ರೇಬಿಸ್ ನಿಯಂತ್ರಿಸುವ ಚುಚ್ಚುಮದ್ದು ನೀಡುವ ಬದಲು ಇಂತಹ ತಲೆಬುಡವಿಲ್ಲದ ಯೋಜನೆಗಳನ್ನು ಹಮ್ಮಿಕೊಂಡು ಟೀಕೆಗೆ ಗುರಿಯಾಗಿದೆ.