Select Your Language

Notifications

webdunia
webdunia
webdunia
webdunia

ಜವರಾಯನಂತೆ ಬಂದ ಹಾಲಿನ ವಾಹನ: ರಸ್ತೆಯಲ್ಲೇ ಪ್ರಾಣಬಿಟ್ಟ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು

MBBS students die, terrible road accident, Shimoga Megan Hospital

Sampriya

ಶಿವಮೊಗ್ಗ , ಬುಧವಾರ, 20 ಆಗಸ್ಟ್ 2025 (10:15 IST)
ಶಿವಮೊಗ್ಗ: ಬೈಕ್ ಹಾಗೂ ನಂದಿನಿ ಹಾಲು ಸಾಗಣೆ ವಾಹನದ ನಡುವೆ ಇಂದು ಬೆಳಿಗ್ಗೆ ಇಲ್ಲಿನ ಸಾಗರ ರಸ್ತೆಯ ಸರ್ಕ್ಯೂಟ್‌ ಹೌಸ್‌ ವೃತ್ತದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಬೈಕ್‌ನಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. 

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಉಡುಪಿಯ 22 ವರ್ಷದ ಆದಿತ್ಯ ಮತ್ತು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ 22 ವರ್ಷದ ಸಂದೀಪ್‌ ಮೃತಪಟ್ಟಿದ್ದಾರೆ. 

ಈ ವಿದ್ಯಾರ್ಥಿಗಳಿಬ್ಬರೂ ಬೆಳಗಿನ ಜಾವ ಬೈಕ್‌ಗೆ ಭಾರ್ಗವಿ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ವಾಪಸ್ ಕಾಲೇಜಿನ ಹಾಸ್ಟೆಲ್‌ಗೆ ಮರಳುವಾಗ ಎದುರಿಗೆ ಬಂದ ಹಾಲಿನ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇಬ್ಬರೂ ವಿದ್ಯಾರ್ಥಿಗಳು ಒಬ್ಬರ ಮೇಲೊಬ್ಬರು ಬಿದ್ದು ಕೊನೆಯುಸಿರೆಳೆದರು.  

ಮೃತದೇಹಗಳನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಿಗ್ಗೆ ಬೆಚ್ಚಿದ ರಾಷ್ಟ್ರ ರಾಜಧಾನಿ: ಸಿಎಂ ರೇಖಾ ಗುಪ್ತಾಗೆ ವ್ಯಕ್ತಿಯಿಂದ ಕಪಾಳಮೋಕ್ಷ