Select Your Language

Notifications

webdunia
webdunia
webdunia
webdunia

ಭೀಕರ ರಸ್ತೆ ಅಪಘಾತ: ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಮೂವರು ದಾರುಣ ಸಾವು

road accident

Sampriya

ಬಳ್ಳಾರಿ , ಭಾನುವಾರ, 1 ಡಿಸೆಂಬರ್ 2024 (10:24 IST)
Photo Courtesy X
ಬಳ್ಳಾರಿ: ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಳ್ಳಾರಿ ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಒಬ್ಬ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಆಂಧ್ರ ಗಡಿಭಾಗದ ವಿಡಪನಕಲ್ ಬಳಿ ನಡೆದಿದೆ.

ಕಾರಿನಲ್ಲಿದ್ದ ಬೀಮ್ಸ್ ಅಂಕೋಕಜಿ ವಿಭಾಗದ ಡಾ.ಗೋವಿಂದರಾಜುಲು, ಅಪ್ತಾಲಜಿ ವಿಭಾಗದ ಡಾ. ಯೋಗೀಶ್, ವಕೀಲ ವೆಂಕಟ ನಾಯುಡು ಮೃತಪಟ್ಟವರು. ಮತ್ತೋರ್ವ ವೈದ್ಯ ಅಮರೇಗೌಡ ಪಾಟೀಲ್ ಗಂಭೀರ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಬೆಳಿಗ್ಗೆ ಅನಂತಪುರ ಕಡೆಯಿಂದ ಬಳ್ಳಾರಿಗೆ ಹಿಂದಿರುಗುವ ಸಂದರ್ಭದಲ್ಲಿ ವಿಡಪನಕಲ್ಲು ಸಮೀಪ ಕಾರ್‌ ಏಕಾಏಕಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.  

ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.  ಸ್ಥಳಕ್ಕೆ ಆಂಧ್ರ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಂಗಲ್‌ ಚಂಡಮಾರುತ ಎಫೆಕ್ಟ್‌: ಸಿಲಿಕಾನ್‌ ಸಿಟಿಯಕಲ್ಲಿ ಕುಸಿದ ತಾಪಮಾನ, ಚಳಿಗೆ ತತ್ತರಿಸಿದ ರಾಜಧಾನಿ