Daily Horoscope

Select Your Language

Notifications

webdunia
webdunia
webdunia
webdunia

ಆಂಧ್ರ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿ ರಾಮ್‌ಗೋಪಾಲ್‌ ವರ್ಮಾ ನಾಪತ್ತೆ: ಪೊಲೀಸರಿಂದ ಹುಡುಕಾಟ

Director Ram Gopal Verma
Photo Courtesy X
ಹೈದರಾಬಾದ್‌: ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರು ಆಂಧ್ರ ಪ್ರದೇಶ ಸಿಎಂ ಎನ್‌. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ,  ಅವರಿಗಾಗಿ ಆಂಧ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಮ್‌ ಗೋಪಾಲ್ ಅವರು ಚಂದ್ರಬಾಬು ನಾಯ್ಡು ಮತ್ತು ಅವರ ಮಗ ನಾರಾ ಲೋಕೇಶ್‌ ಅವರ ತಿರುಚಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಸಭ್ಯವಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ವರ್ಮಾ ಅವರ ವಿರುದ್ಧ ನವೆಂಬರ್ 11ರಂದು ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನವೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ವರ್ಮಾ ಅವರಿಗೆ ಪೊಲೀಸರು ನೋಟಿಸ್ ಹೊರಡಿಸಿದ್ದು, ಬಂಧನದ ಭೀತಿಯಿಂದ ವರ್ಮಾ ವಿಚಾರಣೆಗೆ ಗೈರಾಗಿದ್ದರು. ವರ್ಮಾ ಅವರಿಗಾಗಿ ಆಂಧ್ರ ಪೊಲೀಸರು ಮೂರು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದು, ಎರಡು ತಂಡಗಳು ಹೈದರಾಬಾದ್‌ನಲ್ಲಿ , ಒಂದು ತಂಡ ತಮಿಳುನಾಡಿನಲ್ಲಿ ಬೀಡು ಬಿಟ್ಟಿವೆ.

ಒಂದು ತಂಡ ಚೆನ್ನೈಗೆ ತೆರಳಿದ್ದು, ಮತ್ತೊಂದು ತಂಡ ವರ್ಮಾ ಅವರ ಮನೆಗೆ ಹೋಗಿದೆ. ಮೂರನೇ ತಂಡ ಹೈದರಾಬಾದ್‌ನಲ್ಲಿರುವ ಫಿಲ್ಮ್ ನಗರದಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಈ ಮೊದಲು, ಪ್ರಕರಣ ಸಂಬಂಧ ಪೊಲೀಸರ ಮುಂದೆ ಆನ್‌ಲೈನ್‌ ತನಿಖೆಗೆ ಹಾಜರಾಗಲು ಅವರು(ವರ್ಮಾ) ಇಚ್ಛಿಸುತ್ತಾರೆ ಎಂದು ವರ್ಮಾ ವಕೀಲರು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಕಿಡ್ನ್ಯಾಪ್ ಆಗಿಯೇ ಇಲ್ಲ: ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ವೈಖರಿ