Select Your Language

Notifications

webdunia
webdunia
webdunia
webdunia

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ: ರಾಧಾಕೃಷ್ಣನ್‌ಗೆ ಪ್ರಧಾನಿ ಮೋದಿ ಸೇರಿ ಎನ್‌ಡಿಎ ನಾಯಕರು ಸಾಥ್‌

Vice President Election, NDA Candidate C.P. Radhakrishnan, Prime Minister Narendra Modi

Sampriya

ನವದೆಹಲಿ , ಬುಧವಾರ, 20 ಆಗಸ್ಟ್ 2025 (13:36 IST)
Photo Credit X
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಅಖಾಢ ರಂಗೇರಿದಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಉಪ ರಾಷ್ಟ್ರಪತಿ ಸ್ಪರ್ಧೆಗೆ ರಾಧಾಕೃಷ್ಣನ್ ಅವರು ಸಂಸತ್‌ ಭವನದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಲಾಗಿದೆ.  ತಲಾ 20 ಪ್ರತಿಪಾದಕರು ಮತ್ತು 20 ಅನುಮೋದಕರ ಸಹಿಗಳಿವೆ. ಪ್ರಧಾನಿ ಮೋದಿ ಜೊತೆಗೆ, ಕೇಂದ್ರ ಸಚಿವರು, ಹಿರಿಯ ಸಂಸದರು ಮತ್ತು ಪ್ರಮುಖ ಮೈತ್ರಿಕೂಟದ ನಾಯಕರ ಹೆಸರನ್ನು ದಾಖಲೆಗಳಲ್ಲಿ ಹೆಸರಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಹಲವಾರು ಹಿರಿಯ ಎನ್‌ಡಿಎ ಮಿತ್ರಪಕ್ಷಗಳು ಮತ್ತು ಕೇಂದ್ರ ಸಚಿವರು ಸೇರಿದ್ದಾರೆ.

ಜನತಾದಳ ಯುನೈಟೆಡ್‌ನಿಂದ ಲಲನ್ ಸಿಂಗ್, ಜಾತ್ಯತೀತ ಜನತಾದಳದಿಂದ ಎಚ್‌.ಡಿ. ಕುಮಾರಸ್ವಾಮಿ, ಎಐಎಡಿಎಂಕೆಯಿಂದ ಎಂ. ತಂಬಿ ದುರೈ, ಹಿಂದೂಸ್ತಾನಿ ಅವಾಮ್ ಮೋರ್ಚಾದಿಂದ ಜಿತನ್ ರಾಮ್ ಮಾಂಝಿ, ಲೋಕ ಜನಶಕ್ತಿ ಪಕ್ಷದಿಂದ ಚಿರಾಗ್ ಪಾಸ್ವಾನ್, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದಿಂದ ಪ್ರಫುಲ್ ಪಟೇಲ್ ಮತ್ತು ಅಸ್ಸೋಂ ಗಣ ಪರಿಷತ್‌ನಿಂದ ಬೀರೇಂದ್ರ ಪ್ರಸಾದ್ ಬೈಶ್ಯ ಹಾಜರಿದ್ದರು. 

ಮುಂದಿನ ತಿಂಗಳು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಸಂಸತ್ತಿನಲ್ಲಿ ಎನ್ ಡಿಎ ಸ್ಪಷ್ಟವಾದ ಸಂಖ್ಯಾಬಲವನ್ನು ಹೊಂದಿರುವುದರಿಂದ, ರಾಧಾಕೃಷ್ಣನ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ