Select Your Language

Notifications

webdunia
webdunia
webdunia
webdunia

ಉತ್ಪಾದಕರು, ಬಳಕೆದಾರರ ಮುಖಾಮುಖಿಗೆ ʼಇವಿ ಎಕ್ಸ್ಫೊʼ

ಉತ್ಪಾದಕರು, ಬಳಕೆದಾರರ ಮುಖಾಮುಖಿಗೆ  ʼಇವಿ ಎಕ್ಸ್ಫೊʼ
bangalore , ಗುರುವಾರ, 30 ಜೂನ್ 2022 (20:46 IST)
ಕೇಂದ್ರ ಹಾಗು ಕರ್ನಾಟಕ ಸರಕಾರ ಹಸಿರು ಇಂಧನ ಬಳಕೆಗೆ ಜನರನ್ನು ಉತ್ತೇಜಿಸುತ್ತಿದ್ದು, ಆಧುನಿಕ ತಂತ್ರಜ್ಞಾನ ಹಾಗು ವಿಮೆ ವಿನಾಯಿತಿ ಮೊದಲಾದ ಪೂರಕ ವಾತಾವರಣ ಕಲ್ಪಿಸುವ ಮೂಲಕ ವಿದ್ಯುತ್‌ ಚಾಲಿತ ವಾಹನಗಳ ಹೊಸ ಅಲೆ ದೇಶದಲ್ಲಿ ಸೃಷ್ಟಿಯಾಗಿದೆ. 
ಬೆಂಗಳೂರು ನಗರವನ್ನು ಇವಿ ರಾಜಧಾನಿಯನ್ನಾಗಿ ಮಾರ್ಪಡಿಸುವ ಉದ್ದೇಶದಿಂದ  ರಾಜ್ಯ ಸರಕಾರ 2017ರಲ್ಲಿಇವಿ ನೀತಿಯನ್ನು ಜಾರಿಗೆ ತಂದಿತ್ತು. 
ಇವಿ ಉತ್ತೇಜನ ಮತ್ತು ಚಾರ್ಜಿಂಗ್‌ ಸ್ಟೇಷನ್‌ ಗಳ ಸ್ಥಾಪನೆಗೆ ಪೂರಕ ನೆರವು ನೀಡಲು ರಾಜ್ಯ ಸರಕಾರ ಬೆಸ್ಕಾಂ ಅನ್ನು ನೊಡೆಲ್‌ ಏಜೆನ್ಸಿಯನ್ನಾಗಿ ಕೂಡ ನೇಮಿಸಿದೆ. 
ಇವಿ ಚಾರ್ಜಿಂಗ್‌ ಸ್ಟೇಷನ್‌ ಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲು ಬೆಸ್ಕಾಂ ಈಗಾಗಲೇ ಇವಿ ಮಿತ್ರ ಆಪ್‌ ತಯಾರಿಸಿದ್ದು, ಬೆಸ್ಕಾಂ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬೆಸ್ಕಾಂ ಚಾರ್ಜಿಂಗ್‌  ಸ್ಟೇಷನ್‌ ಗಳ ಕುರಿತು ಸಂಪೂರ್ಣ ಮಾಹಿತಿ ಇವಿ ಆಪ್‌ ನಲ್ಲಿ  ಲಭ್ಯವಿದೆ. 
ನೀತಿ ಆಯೋಗ, ಕರ್ನಾಟಕ ಮತ್ತು ಬ್ರಿಟನ್‌ ಸರಕಾರದ ಸಹಭಾಗಿತ್ವದಲ್ಲಿ ಬೆಂಗಳೂರು ನಗರವನ್ನು ಇವಿ ವಲಯವನ್ನಾಗಿ ರೂಪಿಸುವ ದಿಕ್ಸೂಚಿ ವರದಿ ಮತ್ತು ಇವಿ ಜಾಗೃತಿ ಪೋರ್ಟಲ್‌ ಅನ್ನು ಇತ್ತೀಚೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ  ಸಚಿವ ಸನ್ಮಾನ್ಯ ವಿ. ಸುನಿಲ್‌ ಕುಮಾರ್‌ ಬಿಡುಗಡೆ ಮಾಡಿದರು. 
ಇವಿ ಜಾಗೃತಿ ಪೋರ್ಟ್‌ಲ್‌ ಮೂಲಕ ರಾಜ್ಯದ ಎಲ್ಲ ಬಳಕೆದಾರರು ಇವಿ ನೀತಿ, ಇವಿ ಸಂಬಂಧಿತ ಪ್ರಮುಖ ಬೆಳವಣಿಗೆಗಳು, ಇವಿ ಸಾರ್ಟ್‌ ಅಪ್‌ ಗಳು ಹಾಗು ಇಲೆಕ್ಟ್ರಿಕ್‌ ವಾಹನಗಳ ಬಳಕೆ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.
ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಬೆಸ್ಕಾಂ, ಬೆಂಗಳೂರಿನಲ್ಲಿ 136 ವಿದ್ಯುತ್‌ ಚಾಲಿತ  ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಿದೆ.  ಇನ್ನೂ 152  ಚಾರ್ಜಿಂಗ್ ಸ್ಟೇಷನ್ ಗಳು ಹೊಸದಾಗಿ ಸೇರ್ಪಡೆಗೊಳ್ಳಲಿದೆ.  ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ ಒಂದು ಸಾವಿರ ಇವಿ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಟೆಂಡರ್‌ ಕರೆಯಲಾಗಿದೆ. 
ಇವಿ ಅಭಿಯಾನ : ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಕುರಿತು ಸಾರ್ವಜನಿಕರಿಗೆ ಇನ್ನಷ್ಟು ಅರಿವು ಮೂಡಿಸಲು  ಕರ್ನಾಟಕ ಸರಕಾರ ಜುಲೈ  1  ರಿಂದ 6 ರವರೆಗೆ ಒಂದು ವಾರದ ಇವಿ ಅಭಿಯಾನವನ್ನು ಹಮ್ಮಿಕೊಂಡಿದೆ.  ಇದರ ಭಾಗವಾಗಿ ಬೆಸ್ಕಾಂ ಜುಲೈ 1ರಿಂದ ಜುಲೈ 3 ರವರೆಗೆ ಅರಮನೆ ಮೈದಾನದ ʼಚಾಮರ ವಜ್ರʼ ಸಭಾಂಗಣದಲ್ಲಿ ʼಇವಿ ಎಕ್ಸ್ಪೊʼ ಆಯೋಜಿಸಿದೆ.  
ಸನ್ಮಾನ್ಯ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ “ಇವಿ ಅಭಿಯಾನ ಮತ್ತು ಇವಿ ಎಕ್ಸೋ ವನ್ನು ಉದ್ಘಾಟಿಸಲಿದ್ದಾರೆ. ಮಾನ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್,  ಕೇಂದ್ರ ಸಚಿವರಾದ ಶ್ರೀ. ರಾಜೀವ್‌ ಚಂದ್ರಶೇಖರ್‌ ಮತ್ತು ಶ್ರೀ. ಭಗವಂತ ಖೂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 
ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಮುಖ್ಯಮಂತ್ರಿಗಳು ವಿದ್ಯುಕ್ತ ಚಾಲನೆ ನೀಡಲಿದ್ದಾರೆ. 
ಬೆಸ್ಕಾಂನ ಇವಿ ಮಿತ್ರ ಆಪ್‌,  ಇವಿ ಚಾರ್ಜಿಂಗ್‌ ಸ್ಟೇಷನ್‌ ಮತ್ತು ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ  ಏಕ ಗವಾಕ್ಸಿ ಯಲ್ಲಿ ಅನುಮತಿ ಪಡೆದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದಾರೆ. 
“ಇವಿ ಅಭಿಯಾನ”ದ ಅಂಗವಾಗಿ ಜುಲೈ 2,. 2022 ರಂದು ಬೆಳಿಗ್ಗೆ 6 ರಿಂದ 9 ಗಂಟೆಗೆ 
ಇವಿ ರ್ಯಾಲಿ ಏರ್ಪಡಿಸಲಾಗಿದೆ.  ವಿಧಾನ ಸೌಧದಿಂದ ಅರಮನೆ ಮೈದಾನದವರೆಗೆ ಇವಿ ರ್ಯಾಲಿ ಸಾಗಲಿದ್ದು, ಸುಮಾರು 300 ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳಲಿವೆ.  
ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ತಂದು ಪರಸ್ಪರ ಸಮನ್ವಯ ಸಾಧಿಸಲು ʼಇವಿ ಎಕ್ಸ್ಪೊʼ ನೆರವಾಗಲಿದೆ.  
ಇವಿ ಎಕ್ಸ್ಫೊ ಉದ್ದೇಶಗಳು: ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರಿಗೆ  ವಿದ್ಯುತ್‌ ಚಲನಶೀಲತೆ ಕುರಿತು ಸಮಗ್ರ ಮಾಹಿತಿ ನೀಡುವ ಸಲುವಾಗಿ ಇವಿ ಎಕ್ಸ್ಫೊ ಹಮ್ಮಿಕೊಳ್ಳಲಾಗಿದೆ. ಇವಿ ಉತ್ತೇಜನಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳು ಮತ್ತು ನೀತಿಗಳ ಕುರಿತು ಮಾಹಿತಿ ಒದಗಿಸುವುದೇ ಇವಿ ಎಕ್ಸ್ಫೊ ದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. 
ವಿದ್ಯುತ್‌ ಚಲನಶೀಲತೆ ಕುರಿತು ಸರಕಾರ ಕೈಗೊಂಡ ಕಾರ್ಯಕ್ರಮಗಳು ಉತ್ಪಾದಕರ ಮತ್ತು ಗ್ರಾಹಕರ ನಿರೀಕ್ಷೆಗಳಿಗೆ ಪೂರಕವಾಗಿದೆಯೇ ಎನ್ನುವುದನ್ನು ಅರಿಯಲು ಇವಿ ಎಕ್ಸ್ಫೊ ಸಹಕಾರಿಯಾಗಲಿದೆ. 
ಇವಿ ವಲಯದಲ್ಲಿ ಇತ್ತೀಚೆಗೆ ಆಗಿರುವ ತಂತ್ರಜ್ಞಾನ ಬೆಳವಣಿಗೆ, ಹೊಸ ಸವಾಲುಗಳು, ನಿರೀಕ್ಷೆಗಳು ಮತ್ತು ಸವಾಲುಗಳನ್ನು ಬಗೆಹರಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತು ಅರಿಯಲು ಇವಿ ಎಕ್ಸ್ಫೊ ನೆರವಾಗಲಿದೆ. 
ಇವಿ ಎಕ್ಸ್ಫೊ ದಲ್ಲಿ 100 ಕ್ಕೂ ಅಧಿಕ ವಿವಿಧ ಕಂಪನಿಗಳ/ ಉತ್ಪಾದಕರ ಮಳಿಗೆಗಳು ತಮ್ಮ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರಸ್ತುತ ಪಡಿಸಲಿವೆ.
ಮೂರು ದಿನಗಳ ಕಾಲ ನಡೆಯಲಿರುವ ಇವಿ ಎಕ್ಸ್ಫೊದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. 
ವಿದ್ಯುತ್‌ ಚಾಲಿತ ವಾಹನಗಳ ಮಾರುಕಟ್ಟೆಯಿಂದ ಅನೇಕ ಸುಧಾರಣೆಗಳ ಅಗತ್ಯವಿದೆ.  ಬ್ಯಾಟರಿ ತಯಾರಿಕೆ ಘಟಕ, ಚಾರ್ಜಿಂಗ್‌ ಸ್ಟೇಷನ್‌ ಗಳ ಸ್ಥಾಪನೆ ಹಾಗು ಇತರೆ ಮೂಲ ಸೌಕರ್ಯಗಳ ಅಭಿವೃದ್ದಿ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಇವಿ ಎಕ್ಸ್ಫೊ ಕಾರ್ಯಕ್ರಮ ಆಯೋಜಿಸಲಾಗಿದೆ. 
ಇವಿ ಮಿತ್ರ ಆಪ್‌ 
ಬೆಸ್ಕಾಂ ಇವಿ ಚಾರ್ಜಿಂಗ್‌ ಸ್ಟೇಷನ್‌ ಗಳ ಕುರಿತು ಸಮಗ್ರ ಮಾಹಿತಿ ನೀಡುವ ಇವಿ ಮಿತ್ರ ಆಪ್‌ ನ್ನು ಇವಿ ಎಕ್ಸ್ಫೊ ದಲ್ಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರು ಇವಿ ಮಿತ್ರ ಆಪ್‌ ಡೌನ್‌ಲೊಡ್‌ ಮಾಡಿಕೊಂಡರೆ, ಇವಿ ಚಾರ್ಜಿಂಗ್‌ ಸ್ಟೇಷನ್‌ ಗಳ ಕುರಿತು ಸಂರ್ಪೂಣ ಮಾಹಿತಿ ಆಪ್‌ ನಲ್ಲಿ ಲಭ್ಯವಿದೆ. 
ಇವಿ ಚಾರ್ಜಿಂಗ್ ಸ್ಟೇಷನ್ ಗಳ  ಕುರಿತು ಬೆಸ್ಕಾಂನ ಇವಿ ಮಿತ್ರ ಆ್ಯಪ್ ಸಮಗ್ರ ಮಾಹಿತಿ ಒದಗಿಸಲಿದೆ ನೀವು ಈ ಆ್ಯಪ್ ನ್ನು ಡೌನ್ ಲೊಡ್ ಮಾಡಿಕೂಂಡರೆ ಇವಿ ಚಾರ್ಜಿಂಗ್ ಸ್ಟೇಷನ್ ಗಳು, ಇರುವ ಸ್ಥಳ, ಧರ ಪಟ್ಟಿ, ಚಾರ್ಜಿಂಗ್ ಸೌಲಭ್ಯದ ಲಭ್ಯತೆ ಮುಂತಾದ ಮಾಹಿತಿಗಳನ್ನು ಇವಿ ಮಿತ್ರ ಆ್ಯಪ್ ನಲ್ಲಿ ಪಡೆಯಬಹುದಾಗಿದೆ. ಆ್ಯಪ್ ಮುಲಕ ನಿಮ್ಮ ವಾಹನವನ್ನು ಮುಂಚಿತವಾಗಿ ಚಾರ್ಜಿಂಗ್‌ ಮಾಡಿಕೂಳ್ಳಲು ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಾರ್ಜಿಂಗ್ ಮಾಡಿದ ನಂತರ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಲು ಆ್ಯಪ್ ನಲ್ಲಿ ಅವಕಾಶವಿದೆ.
ಏಕ ಗವಾಕ್ಷಿ ಯೋಜನೆ
 ಹೂಸ  ಚಾರ್ಜಿಂಗ್ ಸ್ಟೇಷನ್ ಗಳಿಗೆ  ವಿದ್ಯುತ್ ಸಂಪರ್ಕ ನೀಡಲು ಬೆಸ್ಕಾಂ “ಏಕ ಗವಾಕ್ಷಿ” ಯೋಜನೆಯನ್ನು ಜಾರಿಗೆ ತಂದಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ನಿಮಗೇನಾದರು ಇವಿ ಚಾರ್ಜಿಂಗ್ ಸ್ಟೇಷನ್ ತೆರೆಯಲು ಆಸಕ್ತಿ ಇದ್ದರೆ. ಬೆಸ್ಕಾಂನ “Single Window Dash Board” ಸೌಲಭ್ಯ ಪೆಡದುಕೂಳ್ಳಿ. ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪೂರಕ ಧಾಖಲೆಗಳನ್ನು ಸಲ್ಲಿಸಿದ ತಕ್ಷಣವೇ  ನಿಮ್ಮ ಚಾರ್ಜಿಂಗ್ ಸ್ಟೇಷನ್ ಗೆ  ವಿದ್ಯುತ್ ಸಂಪರ್ಕ ಸಿಗಲಿದೆ.
ಸಾರ್ವಜನಿಕರು, ಖಾಸಗಿ ಕಂಪನಿಗಳು ಮತ್ತು ಸಂಘ-ಸಂಸ್ಥೆಗಳು ಹೊಸ ಇವಿ ಚಾರ್ಜಿಂಗ್‌ ಸ್ಟೇಷನ್‌ ತೆರೆಯಲು ಆಸಕ್ತಿ ಇದ್ದರೆ, ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ , ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಆನ್‌ ಲೈನ್‌ ನಲ್ಲಿ ಅಪ್‌ ಲೋಡ್‌ ಮಾಡಿ, ವಿದ್ಯುತ್‌ ಸಂಪರ್ಕ ಪಡೆಯಬಹುದು. ಇವಿ ಚಾರ್ಜಿಂಗ್‌ ಗೆ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಏಕ ಗವಾಕ್ಸಿ ಯೋಜನೆ ಜಾರಿಗೆ ತರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಷಾಡ ತರಕಾರಿಯ ಬೆಲೆ ಇಳಿಕೆ