Publish Date: Fri, 02 Feb 2024 (15:45 IST)
Updated Date: Fri, 02 Feb 2024 (15:57 IST)
ಬೆಂಗಳೂರು : ಫೆ. 1 ಗುರುವಾರದಿಂದಲೆ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಪರಿಷ್ಕೃತ ದರ ಜಾರಿಯಾಗಲಿದೆ. ಮಧ್ಯಂತರ ಬಜೆಟ್ ಮುಂದಿರುವಂತೆಯೇ ತೈಲ ಕಂಪನಿಗಳು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 14 ರೂ. ಹೆಚ್ಚಳ ಮಾಡಿರುವುದಾಗಿ ಘೋಷಿಸಿದೆ. ಸಾಮಾನ್ಯ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪರಿಷ್ಕೃರಣೆಯ ಬಳಿಕ ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ1 1769.50 ರೂ. ಆಗಲಿದೆ.
ಪ್ರತಿ ತಿಂಗಳ ಮೊದಲ ದಿನದಂದು ಅನಿಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತಿದ್ದು, ಫೆಬ್ರವರಿ ತಿಂಗಳಿನ ಪರಿಷ್ಕರಣೆ ಇದಾಗಿದೆ.