Publish Date: Fri, 03 Mar 2023 (14:53 IST)
Updated Date: Fri, 03 Mar 2023 (14:55 IST)
ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸ್ಪೋಟವಾಗಿದ್ದು,ಘಟನೆಯಲ್ಲಿ ಒಂದೇ ಕುಟುಂಬದ ಹತ್ತು ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರವಾಗಿದೆ.ರಾಜಾಜಿನಗರದ ಮರಿಯಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದೆ.ಗ್ಯಾಸ್ ಸಿಲಿಂಡರ್ ಆಫ್ ಮಾಡಿರದ ಕಾರಣ ಸೋರಿಕೆಯಾಗಿದೆ.ಬೆಳಿಗ್ಗೆ 6:45ರ ಸುಮಾರಿಗೆ ಅಡುಗೆ ಮಾಡಲು ಹೋದಾಗ ಅವಘಡ ಸಂಭವಿಸಿದೆ.ಸ್ಫೋಟದ ರಭಸಕ್ಕೆ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಸದ್ಯ ಬೆಂಕಿ ಆರಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಗಿದ್ದಾರೆ.
ಸಿಲಿಂಡರ್ ಬ್ಲಾಸ್ಟ್ ಪ್ರಕರಣ ಗಾಯಾಳುಗಳು ಅಜ್ಮಲ್(46) ನಜೀಮ್(42) ರಿಯಾನ್(14) ಅದ್ನಾನ್(12), ಫಯಾಜ್ (10), ಮೆಹರುನ್ನಿಸಾ (11), ಅಜಾನ್ (5) , ಜೈನಬ್ (8) ಅಮೀರ್ ಜಾನ್ (52), ಶಬನಾಜ್ (18), ನಸೀಮಾ, (40), ಸಲ್ಮಾ (33), ರೇಷ್ಮಾ ಬಾನು (48) ಗಾಯಗೊಂಡವರಾಗಿದ್ದಾರೆ.